ಪ್ರಯಾಣಿಕರ ಉಪಯೋಗಕ್ಕಿಲ್ಲದ ತಣ್ಣೀರುಹಳ್ಳ ಬಸ್ ತಂಗುದಾಣಬಸ್ ತಂಗುದಾಣದ ಹಿಂದೆ ಅಂಗನವಾಡಿ ಕೇಂದ್ರವಿದ್ದು, ತಂಗುದಾಣಕ್ಕೆ ಹೊಂದಿಕೊಂಡಂತಿರುವ ವಿದ್ಯುತ್ ಕಂಬಕ್ಕೆ ರಸ್ತೆ ದೀಪದ ಸ್ವಿಚ್ಚನ್ನು ಅಳವಡಿಸಿದ್ದು, ಇದಕ್ಕೆ ಯಾವುದೇ ಮುಚ್ಚಳವಿಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ತಿರುವಿನಲ್ಲಿ ಬಸ್ ನಿಲ್ಲಿಸದ ಕಾರಣ, ಪ್ರಯಾಣಿಕರು ಮಳೆ ಬಿಸಿಲೆನ್ನದೆ ಬೇರೆ ಸ್ಥಳದಲ್ಲಿ ಬಸ್ಗಾಗಿ ಕಾಯುತ್ತಿರುವುದರಿಂದ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮದ ಹರೀಶ್ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.