ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಬಿಲ್ ಪಾವತಿಗೆ ಗಂಟೆಗಟ್ಟಲೆ ಕಾಯುವ ದುಃಸ್ಥಿತಿಒಂದೇ ಜಾಗದಲ್ಲಿ ಹೊರ ರೋಗಿಗಳ ನೋಂದಣಿ, ಒಳರೋಗಿಗಳ ನೋಂದಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕೌಂಟರ್ ಇದ್ದು, ಹೆಚ್ಚಿನ ರೋಗಿಗಳ ಇರುವುದರಿಂದ ಸರತಿ ಸಾಲಿನಲ್ಲಿ ನಿಂತುಕೊಳ್ಳುವಂತಾಗಿದ್ದು, ಚಿಕಿತ್ಸೆ ಕೂಡ ವಿಳಂಬವಾಗುತ್ತಿದೆ. ಚೀಟಿ ಮಾಡಿಸಿ ವೈದ್ಯರ ಬಳಿ ತೆರಳಿದಾಗ ಹೆಚ್ಚಿನ ರೋಗಿಗಳು ಇರುವುದರಿಂದ ಅಲ್ಲೂ ಕೂಡ ರೋಗಿಗಳು ಸರದಿ ಸಾಲಿನಲ್ಲಿ ನಿಂತು ದಿನವೀಡಿ ಆಸ್ಪತ್ರೆಯಲ್ಲೇ ಸಮಯ ಕಳೆಯುವಂತಾಗಿದೆ.