ಲೆದರ್ಬಾಲ್ ಕ್ರಿಕೆಟ್: ಪೊನ್ನಂಪೇಟೆ ಕೊಡವ ಸಮಾಜ ಚಾಂಪಿಯನ್ಅಂತರ್ ಕೊಡವ ಸಮಾಜಗಳ ಮಧ್ಯೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಪ್ರಥಮ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಅಯೋಜಿಸಲಾಯಿತು. ಪಂದ್ಯಾಟದಲ್ಲಿ ಕೊಡಗಿನ ನಾಪೋಕ್ಲು ಕೊಡವ ಸಮಾಜ, ವಿರಾಜಪೇಟೆ ಕೊಡವ ಸಮಾಜ ಎ,ಬಿ ತಂಡಗಳು, ಟಿ.ಶೆಟ್ಟಿಗೇರಿ ಎ,ಬಿ ತಂಡಗಳು, ಪೊನ್ನಂಪೇಟೆ ಕೊಡವ ಸಮಾಜ, ಕುಶಾಲನಗರ ಕೊಡವ ಸಮಾಜ, ಬಾಳಲೆ ಕೊಡವ ಸಮಾಜ, ಮಕ್ಕಂದೂರು ಕೊಡವ ಸಮಾಜ ಮತ್ತು ಮೂರ್ನಾಡು ಕೊಡವ ಸಮಾಜಗಳ ಕ್ರಿಡಾ ಪಟುಗಳು ಭಾಗವಹಿಸಿದ್ದರು.