ಕಸ ಸಂಗ್ರಹಿಸುವ ರಾಣಿಯಮ್ಮ ಈಗ ನಗರಸಭೆ ಉಪಾಧ್ಯಕ್ಷೆನಗರದ ವಿವಿಧೆಡೆ ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕಾಯಕವನ್ನು ನಿರ್ವಹಿಸುತ್ತಿರುವ ಶಾಂತಿನಗರದ ರಾಣಿಯಮ್ಮ ಸಚಿವ ಡಾ ಎಂ.ಸಿ.ಸುಧಾಕರ್ ಬೆಂಬಲಿತರಾಗಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ನಗರಸಭೆಯ ಉಪಾಧ್ಯಕ್ಷೆ ಹುದ್ದೆ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಸಚಿವ ಸುಧಾಕರ್ ಬಣದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ರೇಖಾ ಉಮೇಶ್ ಹಾಗೂ ರಾಣಿಯಮ್ಮಗೆ ಮಾತ್ರ ಅವಕಾಶವಿದ್ದು, ರಾಣಿಯಮ್ಮರಿಗೆ ಉಪಾಧ್ಯಕ್ಷೆ ಹುದ್ದೆ ಒಲಿದು ಬಂದಿದೆ