ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವುದು ನಮ್ಮ ಕರ್ತವ್ಯ: ಪ್ರೇಮಲತಾಪ್ಲಾಸ್ಟಿಕ್ ಒಂದು ಪರಿಸರದಲ್ಲಿ ವಿಘಟನೆಯಾಗದ ವಸ್ತುವಾಗಿದ್ದು, ಸಾವಿರಾರು ವರ್ಷಗಳು ಭೂಮಿಯಲ್ಲಿ ಉಳಿದು ಮಾಲಿನ್ಯಕಾರಕವಾಗಿ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ವಿಶ್ವ ವನ್ಯಜೀವಿ ನಿಧಿಯ ಹೊಸ ವರದಿಯ ಪ್ರಕಾರ ಪಳೆಯುಳಿಕೆ ಇಂಧನದಿಂದ ಪಡೆದ ವಸ್ತು ಸಮುದ್ರದ ಪ್ರತಿಯೊಂದು ಭಾಗವನ್ನೂ ತಲುಪಿದೆ, ಭೂಮಿಯ ಮೇಲ್ಮೈಯನ್ನು ಆವರಿಸಿದೆ, ಇದರಿಂದ ನಮ್ಮ ಜಲ, ನೆಲ, ಮಣ್ಣು ಎಲ್ಲವೂ ಪ್ಲಾಸ್ಟಿಕ್ ಮಯವಾಗಿದೆ.