ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋಚಿಮುಲ್ ಎಂಡಿಗೆ ಮನವಿಇತ್ತೀಚೆಗೆ ಸಂಘಗಳಲ್ಲಿ ಆನ್ಲೈನ್ ಸಾಫ್ಟ್ವೇರ್ ವ್ಯವಸ್ಥೆ ಅಳವಡಿಸಿಕೊಳ್ಳಲು ಒಕ್ಕೂಟದಿಂದ ನಿರ್ದೇಶನ ನೀಡಲಾಗಿದ್ದು, ಮೊದಲು ಒಕ್ಕೂಟದಲ್ಲಿ ಅಳವಡಿಸಿ ಆ ಬಳಿಕ ಸಂಘಗಳಿಗೆ ನಿರ್ದೇಶನ ನೀಡಬೇಕು. ತೀವ್ರ ಬೇಸಿಗೆ ಹಿನ್ನೆಲೆಯಲ್ಲಿ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಕ್ಲಿಷ್ಟಕರ ಪರಿಸ್ಥಿತಿಯನ್ನು ಸಂಘಗಳಲ್ಲಿ ಎದುರಿಸುತ್ತಿದ್ದು, ಇದಕ್ಕೆ ತಾವು ಒಕ್ಕೂಟದ ಗುಣಮಟ್ಟ ನಿಯಂತ್ರಣ ವಿಭಾಗಕ್ಕೆ ೦.೫ ಎಸ್.ಎನ್.ಎಫ್. ಅನ್ನು ಸರಿದೂಗಿಸಿ ಕೊಡಲು ನಿರ್ದೇಶನ ನೀಡಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದರು.