ಶ್ರೀಕೃಷ್ಣನ ಸಂದೇಶ ಸಾರ್ವಕಾಲಿಕ ಸತ್ಯಮನುಷ್ಯನ ಒಳಿತು, ಕೆಡಕಿನ ಸತ್ಯಗಳು ಮಹಾಭಾರತ, ರಾಮಾಯಣದಲ್ಲಿ ನಮಗೆ ಸಿಗುತ್ತವೆ. ಇವು ಪೌರಾಣಿಕ ಕಾವ್ಯಗಳಾಗಿವೆ. ಈ ಎರಡೂ ಕಾವ್ಯಗಳು ಕನ್ನಡ ಕವಿಗಳಿಗೆ ಹೆಚ್ಚು ಬರವಣಿಗೆ ಅವಕಾಶವಾಯಿತು. ನಮ್ಮ ಮನಸ್ಸು, ಬುದ್ಧಿ, ವಿವೇಕಕ್ಕೆ ಒಳಿತಾದ ಸಂಸ್ಕೃತಿಯ ವಾಹಕಗಳಾಗಿ ಈ ಕಾವ್ಯಗಳಿವೆ.