• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಕ್ಕಳ ಆರೈಕೆಗೆ ಕೂಸಿನ ಮನೆ ಸಹಕಾರಿ: ಪಾಟೀಲ
ಕನ್ನಡಪ್ರಭ ವಾರ್ತೆ ಯಲಬುರ್ಗಾಮಕ್ಕಳೇ ಭವಿಷ್ಯದ ನಾಗರಿಕರು, ಮಕ್ಕಳ ಆರೈಕೆ ಅತಿ ಮುಖ್ಯವಾಗಿದ್ದು, ಗ್ರಾಪಂ ಕೂಸಿನ ಮನೆಗಳು ಸಹಕಾರಿಯಾಗಲಿವೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ್ ಹೇಳಿದರು.ಪಟ್ಟಣದ ತಾಪಂ ಸಾಮರ್ಥ್ಯ ಕೇಂದ್ರದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ಅವಳಿ ತಾಲೂಕಿನ ಶಿಶುಪಾಲಕಿಯರಿಗೆ ಎರಡನೇ ಹಂತದ ೭ ದಿನಗಳ ಮಕ್ಕಳ ಆರೈಕೆದಾರರ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ಪಿಎಚ್‌ಡಿ ಪದವಿ ಪ್ರವೇಶಕ್ಕೂ 371 ಜೆ ಮೀಸಲು ಅನ್ವಯ
ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪದವಿ ಪ್ರವೇಶ ನೀಡುವ ಸಂದರ್ಭದಲ್ಲೂ 371 ಜೆ ವಿಶೇಷ ಸ್ಥಾನಮಾನದಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಗಳಲ್ಲಿ ಶೇ.70 ಹಾಗೂ ರಾಜ್ಯದ ಇತರ ವಿವಿಗಳಲ್ಲಿ ಶೇ.8 ರಷ್ಟು ಸ್ಥಾನವನ್ನು ಈ ಭಾಗದ (ಕಲ್ಯಾಣ ಕರ್ನಾಟಕ) ವಿದ್ಯಾರ್ಥಿಗಳಿಗೆ ನೀಡಬೇಕು. ಈ ಕುರಿತು ಇದ್ದ ಗೊಂದಲಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡುವ ಮೂಲಕ ಗೊಂದಲ ನಿವಾರಿಸಿದ್ದಾರೆ.
ರಂಗಭೂಮಿ ಕಲಾಸಂತ ಬಾಬಣ್ಣ ಕಲ್ಮನಿ ನಿಧನ
ಕುಕನೂರು ಪಟ್ಟಣದ ಹಿರಿಯ ರಂಗಭೂಮಿ ಕಲಾ ಸಂತ ಬಾಬಣ್ಣ ಕಲ್ಮನಿ (ಜಲಾಲುದ್ದೀನ್) (89) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು. ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಜರುಗಿತು. ಗಣ್ಯರು, ಮುಖಂಡರು, ಕಲಾವಿದರು ಬಾಬಣ್ಣ ಅವರ ಅಗಲಿಕೆಗೆ ಕಂಬನಿ ಮಿಡಿಸಿದರು. ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಅವರು ಮುಡಿಗೇಸಿಕೊಳ್ಳುವ ಮೊದಲೇ ಅಸ್ತಂಗತರಾಗಿದ್ದು, ರಂಗಭೂಮಿಗೆ ತುಂಬರಾದ ನಷ್ಟವಾಗಿದೆ.
ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ-ದಾರುಕೇಶ
ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಚಂದ್ರಯಾನ -2 ಉಡಾವಣೆ ಯಶಸ್ವಿಗೊಳಿಸಿದ ಇಸ್ರೋ ತಂಡದ ಪ್ರಮುಖ ಸದಸ್ಯ, ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ ಹೇಳಿದರು. ಕಲಿಕಾ ವಿಷಯವಾಗಿ ವಿಜ್ಞಾನದ ಮಹತ್ವ ಅಪಾರ. ಜಗತ್ತಿನಲ್ಲಿನ ಎಲ್ಲ ಹುದ್ದೆಗಳನ್ನು ವಿದ್ಯಾರ್ಥಿಗಳು ಪಟ್ಟಿಮಾಡಿ, ಆ ವಿಷಯದ ಬಗ್ಗೆ ಒಂದು ಪುಟ ಟಿಪ್ಪಣಿ ಮಾಡಿ, ನಂತರ ಸಾಧನೆ ಮಾಡಿ, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ವಿಜ್ಞಾನ ಇಂದು ತುಂಬ ಮುಂದುವರಿದಿದೆ. ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಭೂಮಿ ನಮಗೆ ತೊಟ್ಟಿಲು ಇದ್ದಂತೆ. ಬದುಕ ಬೇಕಾದರೆ ಕೆಳಗಿಳಿಯಲೇಬೇಕು. ಭವಿಷ್ಯದಲ್ಲಿ ಮಂಗಳಗ್ರಹ, ಚಂದ್ರನಲ್ಲಿ ಮಾನವನ ವಾಸ್ತವ್ಯದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ನೀರಿಲ್ಲದೇ ಒಣಗುತ್ತಿರುವ ರಸ್ತೆ ಬದಿ ಸಸಿ
ಗಿಡ ಬೆಳೆಸಿ, ಪರಿಸರ ಉಳಿಸಿ ಎಂಬ ಘೋಷಣೆಯು ಘೋಷಣೆಯಾಗಿಯೇ ಉಳಿದಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಸಿಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕದ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ತಾಲೂಕಿನ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಕಳೆದ ಒಂದು ತಿಂಗಳ ಹಿಂದಷ್ಟೇ ಸಾವಿರಾರು ಸಸಿಗಳನ್ನು ಸಾಮಾಜಿಕ ಅರಣ್ಯ ವಲಯದಿಂದ ನೆಟ್ಟು ಕೈ ತೊಳೆದುಕೊಂಡಿದೆ. ಅವುಗಳ ರಕ್ಷಣೆಗೆ ಬರುತ್ತಿಲ್ಲ. ನೆಟ್ಟಿರುವ ಗಿಡಗಳು ಒಣಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕಾಲಕಾಲಕ್ಕೆ ನೀರು ಹಾಕಿ ಸಸಿಗಳ ಪಾಲನೆ ಪೋಷಣೆ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದ ಅಂಬೋಣ.
ಜನನ, ಮರಣ ಪ್ರಮಾಣಪತ್ರ ಎಚ್ಚರಿಕೆಯಿಂದ ನೀಡಿ-ಜಿಪಂ ಸಿಇಒ
ವ್ಯಕ್ತಿಯ ಜನನ ಮತ್ತು ಮರಣ ಪ್ರಮಾಣಪತ್ರಗಳು ಸದ್ಯದ ಹಾಗೂ ಭವಿಷ್ಯದ ದಿನಗಳಲ್ಲಿ ಮಹತ್ವದ ದಾಖಲೆಗಳಾಗಿವೆ. ಜನನ ಪ್ರಮಾಣಪತ್ರ ಪಡೆಯುವುದು ಮಗುವಿನ ಮೊದಲ ಹಕ್ಕಾಗಿದೆ. ಮಗುವನ್ನು ಶಾಲೆಗೆ ಸೇರಿಸಲು, ಉದ್ಯೋಗಕ್ಕಾಗಿ, ಆಧಾರ್ ಕಾರ್ಡ್ ಪಡೆಯಲು, ವಿಮಾ ಪಾಲಿಸಿ ಪಡೆಯಲು, ಪಡಿತರ ಚೀಟಿ ಪಡೆಯಲು, ವಿವಾಹ ನೋಂದಣಿ ಮುಂತಾದ ಸಂದರ್ಭಗಳಲ್ಲಿ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅದರಂತೆ ವಿಮಾ ಹಣ ಪಡೆಯಲು, ಆಸ್ತಿಯ ಹಕ್ಕನ್ನು ನಿರ್ಧಾರ ಮಾಡಲು, ಪಿಂಚಣಿ ಹಕ್ಕು ಹೊಂದಲು, ಅನುಕಂಪದ ಆಧಾರದ ನೌಕರಿ, ಅಪಘಾತ ಪರಿಹಾರ ಪಡೆಯಲು, ಮುಂತಾದ ವಿಷಯಗಳಲ್ಲಿ ಮರಣ ಪ್ರಮಾಣದ ಅಗತ್ಯ ಹಾಗೂ ಕಡ್ಡಾಯವಿದೆ.
ಕಾಸ್ಮೊಸ್ ಪುಷ್ಪ ಕೃಷಿಯತ್ತ ವಾಲಿದ ರೈತ
ರೈತರು ಅಲ್ಪ ಬೆಳೆಯಾದ ಪುಷ್ಪ ಕೃಷಿಯತ್ತ ವಾಲುತ್ತಿದ್ದು, ಉತ್ತಮ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಸಮೀಪದ ಮಡಿಕೇರಿ, ಬೆನಕನಾಳ, ಯರಗೇರಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ರೈತರು ಪುಷ್ಪ ಕೃಷಿಯತ್ತ ವಾಲುತ್ತಿದ್ದಾರೆ. ಸದ್ಯ ಮಡಿಕೇರಿ ಗ್ರಾಮದ ರೈತ ಈಶಪ್ಪ ಈಳಗೇರ ಕಾಸ್ಮೊಸ್ ಹೂ ಬೆಳೆದು ಉತ್ತಮ ಇಳುವರಿ ಪಡೆದು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಸಾವಯವ ವಿಧಾನದಲ್ಲಿ ತಮ್ಮ ಒಂದು ಎಕರೆ ನೀರಾವರಿ ಜಮೀನಿನಲ್ಲಿ ಕಾಸ್ಮೊಸ್ ಬೆಳೆ ಬೆಳೆದು ಉತ್ಕೃಷ್ಟ ಮಟ್ಟದ ಹೂಗಳನ್ನು ಬಿಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ಬೆಳೆದ ಕಾಸ್ಮೊಸ್ ಹೂವಿನ ಬೆಳೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಗ್ರಾಮೀಣ ಬೀಟ್ ಕಟ್ಟುನಿಟ್ಟಾಗಿ ನಡೆಯಲಿ-ಎಡಿಜಿಪಿ ಅಲೋಕಕುಮಾರ
ಗ್ರಾಮೀಣ ಪ್ರದೇಶದಲ್ಲಿಯೂ ಪೊಲೀಸ್ ಬೀಟ್ ಇದ್ದೇ ಇರುತ್ತದೆ. ಆದರೆ, ಅದು ಕಟ್ಟುನಿಟ್ಟಾಗಿ ಆಗಬೇಕು. ಹೀಗೆ ಬೀಟ್‌ನಲ್ಲಿರುವವರಿಗೆ ಜವಾಬ್ದಾರಿ ನೀಡಬೇಕು. ಆ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾದರೆ ಅವರ ವಿರುದ್ಧವೂ ಕ್ರಮವಾಗಬೇಕು. ಮಟ್ಕಾ ದಂಧೆ, ಅಕ್ರಮ ಮದ್ಯ ಮಾರಾಟ, ವೇಶ್ಯಾವಾಟಿಕೆ ಸೇರಿದಂತೆ ಮೊದಲಾದವುಗಳ ಮಾಹಿತಿ ಸಂಗ್ರಹಿಸಿ, ಅದರ ವಿರುದ್ಧ ಕ್ರಮವಾಗುವಂತೆ ಬೀಟ್‌ನಲ್ಲಿ ಇದ್ದವರು ಮಾಡಬೇಕು. ಇನ್ನು ಗಾಂಜಾ ಮಾರಾಟ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲು ಕೇವಲ ಕೇಸ್ ಹಾಕಿದರೆ ಸಾಲದು, ಅಷ್ಟು ಕೇಸ್ ಹಾಕಿದ್ದೇವೆ, ಇಷ್ಟು ಕೇಸ್ ಹಾಕಿದ್ದೇವೆ ಎನ್ನುವುದಷ್ಟೇ ಸಾಧನೆಯಲ್ಲ. ಅದನ್ನು ನಿಯಂತ್ರಣ ಮಾಡುವ ದಿಸೆಯಲ್ಲಿ ಕ್ರಮವಾಗಬೇಕು ಎಂದರು.
ಕುಕನೂರಿಗೆ ಇಂದಿರಾ ಕ್ಯಾಂಟೀನ್ ಮಂಜೂರು-₹1.54 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಸರ್ಕಾರ ಆದೇಶ
ಬಡ ವರ್ಗದವರಿಗೆ, ಹಸಿದವರಿಗೆ ಕಡಿಮೆ ವೆಚ್ಚದಲ್ಲಿ ಊಟ ಸಿಗಲಿ ಎಂದು ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ನಗರ, ಪಟ್ಟಣ ಕೇಂದ್ರಗಳಲ್ಲಿ ಈ ಹಿಂದೆ ಆರಂಭಿಸಿತ್ತು. ಇದರಿಂದ ಶ್ರಮಿಕ ವರ್ಗಕ್ಕೆ ಹಾಗೂ ಬಡ ವರ್ಗಕ್ಕೆ, ಹಸಿದವರಿಗೆ ಕಡಿಮೆ ವೆಚ್ಚದಲ್ಲಿ ಆಹಾರ ಸಿಗುತ್ತಿತ್ತು. ಇನ್ನು ಹಲವೆಡೆ ಕ್ಯಾಂಟೀನ್ ಬೇಡಿಕೆ ಹೆಚ್ಚಿತ್ತು. ಅಂತಹ ಅವಶ್ಯಕ ಕೇಂದ್ರಗಳಲ್ಲಿ ಕುಕನೂರು ಪಟ್ಟಣಕ್ಕೂ ಕ್ಯಾಂಟೀನ್ ಅವಶ್ಯಕತೆ ಇತ್ತು. ನಿತ್ಯ ಪಟ್ಟಣಕ್ಕೆ ವ್ಯಾಪಾರ, ವಹಿವಾಟು, ಶಾಲಾ, ಕಾಲೇಜು, ಎಪಿಎಂಸಿ ಮಾರುಕಟ್ಟೆ, ಕಚೇರಿಗಳಿಗೆ ಬರುವ ಜನರು, ಕಾರ್ಮಿಕರು ಹೀಗೆ ಜನಜಂಗುಳಿಯಿಂದ ಕುಕನೂರು ತುಂಬಿರುತ್ತದೆ. ಹೊಟೆಲ್ ಗಳಲ್ಲಿ ದುಬಾರಿ ಬೆಲೆಗೆ ಆಹಾರ ಸೇವಿಸುವ ಅನಿವಾರ್ಯತೆ ಇತ್ತು. ಈ ಸಮಸ್ಯೆ ನೀಗಿದಂತಾಗಿದೆ.
ಒಣಮೀಸಲಾತಿಗಾಗಿ ಒಂದಾಗೋಣ-ಬಸವರಾಜ ದಡೆಸೂಗುರ
ಒಳ ಮೀಸಲಾತಿ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಒಳಮೀಸಲಾತಿ ಹೋರಾಟವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು, ಇದರ ಜಾರಿಗಾಗಿ ಒಂದಾಗಿ ಹೋರಾಟ ಮಾಡೋಣ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಕರೆ ನೀಡಿದ್ದಾರೆ. ನಗರದ ಖಾಸಗಿ ಹೋಟೆಟ್‌ನಲ್ಲಿ ಬುಧವಾರ ನಡೆದ ಮಾದಿಗ ಮುನ್ನಡೆ ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ಬಹುಪಾಲು ಜನಸಂಖ್ಯೆ ಹೊಂದಿದ್ದು, ಜನಸಂಖ್ಯಾ ಅನುಗುಣವಾಗಿ ಮೂರು ದಶಕಗಳ ಮೀಸಲಾತಿ ವರ್ಗೀಕರಣ ಹೋರಾಟವನ್ನು ನಿರ್ಲಕ್ಷ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಮಾದಿಗ ಮುನ್ನಡೆ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದರು.
  • < previous
  • 1
  • ...
  • 549
  • 550
  • 551
  • 552
  • 553
  • 554
  • 555
  • 556
  • 557
  • ...
  • 569
  • next >
Top Stories
ರಾಷ್ಟ್ರ ನಿರ್ಮಾಣಕ್ಕೆ ಎಂಎಸ್ಎಂಇ, ಸ್ಟಾರ್ಟ್ಅಪ್ ಕೊಡುಗೆ
2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ
ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ
ಬಿಗ್‌ ಬಾಸ್‌ ಸಿಂಹಿಣಿ ಸಂಗೀತಾ ಶೃಂಗೇರಿಯ ಹೊಸ ಸಾಹಸ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved