ವಿಕಲಚೇತನರಿಗೆ ನೆರವಾದ ಲಗುನಾ ಗಾರ್ಮೆಂಟ್ಸ್ ಸಂಸ್ಥೆ

| Published : Nov 23 2025, 01:30 AM IST

ವಿಕಲಚೇತನರಿಗೆ ನೆರವಾದ ಲಗುನಾ ಗಾರ್ಮೆಂಟ್ಸ್ ಸಂಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಸಮಾಜದಲ್ಲಿ ವಿಶಿಷ್ಟವಾದ ಸುಮಾರು ನೂರು ಮಕ್ಕಳಿಗೆ ನಮ್ಮ ಸಂಸ್ಥೆ ವತಿಯಿಂದ ಹಾಸಿಗೆ, ಹೊದಿಕೆ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಲು ಅವಕಾಶ ಮಾಡಿಕೊಟ್ಟ ಅಮರ ಜ್ಯೋತಿ ಸಂಸ್ಥೆ ಹಾಗೂ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ನಗರದ ಹೊರ ವಲಯದಲ್ಲಿರುವ ಲಗುನಾ ಗಾರ್ಮೆಂಟ್ಸ್ ವತಿಯಿಂದ ವಿಕಲಚೇತನರಿಗೆ ಉಚಿತ ಹಾಸಿಗೆ, ಹೊದಿಕೆ ಸೇರಿದಂತೆ ದಿನನಿತ್ಯ ಉಪಯೋಗದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.

ನಗರದ ಬಿ.ಆರ್. ಸಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಗುನಾ ಗಾರ್ಮೆಂಟ್ಸ್ ನ ಎಚ್. ಆರ್ ಕೇಂದ್ರದ ಸ್ಮಿತಾ ಮಾತನಾಡಿ, ಸಮಾಜದಲ್ಲಿ ಬದುಕಲು ಪ್ರತಿಯೊಬ್ಬರಿಗೂ ಹಕ್ಕಿದ್ದು, ಕೆಲವು ಅನಿವಾರ್ಯ ಕಾರಣಗಳಿಂದ ದೈಹಿಕ ಹಾಗೂ ಮಾನಸಿಕ ಅಸ್ವಸ್ಥರಾಗಿ ಜೀವನ ನಡೆಸುತ್ತಿರುತ್ತಾರೆ, ಇಂಥವರ ಸೇವೆ ಮಾಡುವ ಅವಕಾಶ ನಮ್ಮ ಸಂಸ್ಥೆಗೆ ಲಭಿಸಿರುವುದು ನಮ್ಮ ಸಂಸ್ಥೆಯ ಪುಣ್ಯವಾಗಿದೆ, ನಮ್ಮ ಸಂಸ್ಥೆ ಕಳೆದ ಹದಿನೈದು ವರ್ಷಗಳಿಂದ ಉತ್ತಮ ವಹಿವಾಟು ನಡೆಸಲು ಕಾರ್ಮಿಕರು ಹಾಗೂ ತಾಲೂಕಿನ ಜನತೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ತನ್ನ ಸೇವಾ ನಿಧಿಯಿಂದ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೇರಣೆಯಾಗಿದೆ ಎಂದರು.

ಸಂಸ್ಥೆಯಲ್ಲಿ ಸುಮಾರು 20 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರ ಕುಟುಂಬದ ಆರೋಗ್ಯವು ಮುಖ್ಯವಾಗಿರುವುದರಿಂದ ನುರಿತ ವೈದ್ಯರ ತಂಡಗಳಿಂದ ಉಚಿತ ಆರೋಗ್ಯ ತಪಾಸಣೆಗಳ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ, ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಅಲ್ಪ ಪ್ರಮಾಣದ ಪ್ರಯತ್ನ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಇಂದು ಸಮಾಜದಲ್ಲಿ ವಿಶಿಷ್ಟವಾದ ಸುಮಾರು ನೂರು ಮಕ್ಕಳಿಗೆ ನಮ್ಮ ಸಂಸ್ಥೆ ವತಿಯಿಂದ ಹಾಸಿಗೆ, ಹೊದಿಕೆ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಲು ಅವಕಾಶ ಮಾಡಿಕೊಟ್ಟ ಅಮರ ಜ್ಯೋತಿ ಸಂಸ್ಥೆ ಹಾಗೂ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಅಮರ ಜ್ಯೋತಿ ಸಂಸ್ಥೆಯ ರಾಮಚಂದ್ರ ಮಾತನಾಡಿ, ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡು ಅಶಕ್ತರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದು ಬಹಳ ಶ್ರೇಷ್ಠ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಲಗುನಾ ಸಂಸ್ಥೆ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದು ಅವರ ಸೇವಾ ಚಟುವಟಿಕೆಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ದಿವ್ಯ ,ಬಿ ಐ ಆರ್ ಟಿ ಎಸ್. ಬಿ. ಗೌಡ, ಡಿವೈಪಿಸಿ ಭಾರತಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.