ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಬಲ್ಲಮಾವಟಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯದ ವತಿಯಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗೆಗಿನ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಬಲ್ಲಮಾವಟಿಯ ಇಗ್ಗುತ್ತಪ್ಪ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಲಮಾವಟಿ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಮಣಮಟ್ಟಿರ ಹರೀಶ್ ಕುಶಾಲಪ್ಪ ಅವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲೇಖಾ ತುಂಬ ಸರಳವಾಗಿ ಪಂಚಮಹಾಭೂತಗಳಾದ ಪೃಥ್ವಿ ಆಕಾಶ, ಜಲ, ವಾಯು ಮತ್ತು ಅಗ್ನಿ ತತ್ವಗಳು ನಮ್ಮ ದೇಹದೊಂದಿಗೆ ಹೇಗೆ ಮಿಳಿತವಾಗಿದೆ ಎಂದು ಮನಮುಟ್ಟುವಂತೆ ವಿವರಿಸಿದರು.ನಮ್ಮ ಸ್ಥೂಲ ಮತ್ತು ಸೂಕ್ಷ್ಮ ಶರೀರದಲ್ಲಿ ಯಾವ ರೀತಿ ಪರಿಣಾಮಗಳನ್ನು ಬೀರುತ್ತದೆ , ಈ ಪಂಚಭೂತಗಳ ಸಹಾಯದಿಂದ ನಾವು ಯಾವ ರೀತಿ ಚಿಕಿತ್ಸೆಯನ್ನು ಪಡೆಯಬಹುದು. ನಾವು ಅದರೊಂದಿಗೆ ಅನುಸರಿಸಬೇಕಾದ ಪಂಚತಂತ್ರಗಳಾದ ನೀರಿನ ಸೇವನೆ, ಉಪವಾಸ, ಭೋಜನಾ ಕ್ರಮ, ಪ್ರಾರ್ಥನೆ , ವ್ಯಾಯಾಮ ಇವುಗಳು ನಮ್ಮ ದೇಹ ಮತ್ತು ಮನಸ್ಸಿನಲ್ಲಿ ಮಾಡುವ ಪರಿಣಾಮಗಳು, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ನಮ್ಮ ಜೀವನ ಶೈಲಿ ಹೇಗಿರಬೇಕು ? ಇಂದಿನ ಪ್ರಸ್ತುತ ಸ್ಥಿತಿಯಲ್ಲಿ ನಮ್ಮ ಜೀವನ ಶೈಲಿಯ ಬದಲಾವಣೆಯ ಅವಶ್ಯಕತೆಯ ಬಗೆ ವರ್ಣ ಚಿಕಿತ್ಸೆ , ಬಣ್ಣದ ಚಿಕಿತ್ಸೆ ಅಥವಾ ಕ್ರೋಮೋಥೆರಪಿ ಬಣ್ಣಗಳು ನಮ್ಮ ದೇಹ , ಮನಸ್ಸಿನ ಮೇಲೆಯಾವ ರೀತಿ ಪರಿಣಾಮವನ್ನು ಬೀರುತ್ತೆ ಎಂದು ಉದಾಹರಣೆಗಳ ಮೂಲಕ ತಿಳಿಸಿದರು.
ಸೂಜಿ ಚಿಕಿತ್ಸೆ (acupuncture) ಮತ್ತು ಒತ್ತಡ ಚಿಕಿತ್ಸೆಯನ್ನು (occup pressure) ಯಾವ ರೀತಿ ನಾವು ಬಳಸಬಹುದು ನಮ್ಮ ದೇಹದ ಪ್ರೆಷರ್ ಪಾಯಿಂಟ್ಸ್ ಒತ್ತಡದ ಬಿಂದುಗಳು ಯಾವುವು ತಲೆನೋವಿನಂತಹ ಕೆಲವು ಕಾಯಿಲೆಗಳಿಗೆ ಯಾವ ರೀತಿ ನಾವು ಒತ್ತಡ ಚಿಕಿತ್ಸೆಯನ್ನು ಬಳಸಬಹುದು, ಅದೇ ರೀತಿ ಯೋಗ, ಪ್ರಾಣಾಯಾಮ ಆಸನಗಳು ಷಟ್ ಕ್ರಿಯೆಗಳು. ಮೂಲಾಧಾರದಿಂದ ಸಹಸ್ರಾರದವರೆಗಿನ ಚಕ್ರಗಳು ಇವುಗಳನ್ನು ನಾವು ಚಿಕಿತ್ಸಾತ್ಮಕವಾಗಿ ಯಾವ ರೀತಿ ಬಳಸಬಹುದು ಎಂದು ಮಾಹಿತಿ ನೀಡಿದರು.ಚೇಕ್ ಪುವಂಡ ಮಿಥುನ್ ಚಂಗಪ್ಪ ಪ್ರಾಸ್ತಾವಿಕ ನುಡಿಯಾಡಿದರು.ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಮಚ್ಚುರ ರವೀಂದ್ರ ,ಕಂದಾಯ ಇಲಾಖೆಯ ನಿವೃತ್ತ ಸಿಬ್ಬಂದಿ ಅಪ್ಪಚೆಟ್ಟೊಳಂಡ ರಾಜ ಭೀಮಯ್ಯ , ಆರೋಗ್ಯ ಇಲಾಖೆಯ ನಿವೃತ್ತ ಸುಶ್ರುಸಕಿ ನುಚ್ಚಿಮಣೆಯಂಡ ಡಾಟಿ , ಕಾವೇರಿ ಮಹಿಳಾ ಸಂಘದ ಅಧ್ಯಕ್ಷಿನಿ ಅಪ್ಪಚೆಟ್ಟೊಳಂಡ ವನು ವಸಂತ , ನ್ಯಾಚುರೂಪತಿ ಮತ್ತು ಯೋಗ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಚೀಯಕ ಪೂವಂಡ ಕುನಾಲ್ ದೇವಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))