• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬೂಕನಕೆರೆ, ಶೀಳನೆರೆ ಹೋಬಳಿ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ ಎಚ್.ಟಿ.ಮಂಜು
ಮೊದಲ ಹಂತದ 46 ಕೆರೆಗಳನ್ನು ತುಂಬಿಸಲು ಸುಮಾರು 300 ಎಂ.ಸಿ.ಎಫ್.ಟಿ ಪ್ರಮಾಣದ ನೀರಿನ ಅಗತ್ಯವಿದೆ. ಕೆರೆ ತುಂಬಿಸಲು ನೀರಿನ ಕೊರತೆ ಎದುರಾದರೆ ಗೊರೂರಿನ ಹೇಮಾವತಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರನ್ನು ಬಿಡಿಸಿಕೊಳ್ಳಬೇಕಾಗುತ್ತದೆ. 46 ಕೆರೆಗಳನ್ನು ತುಂಬಿಸಲು 24 ಕಿಮೀ ನೀರನ್ನು ಸಾಗಿಸಬೇಕಾಗಿರುವುದರಿಂದ ಪ್ರಾಯೋಗಿಕವಾಗಿ ನೀರನ್ನು ಸಮೀಪದ ಕೆರೆಗಳಿಗೆ ಪೈಪುಗಳಿಂದ ಹರಿಸಿ ಪರೀಕ್ಷೆ ಮಾಡಬೇಕು.
ಸರ್ಕಾರಿ ಶಾಲೆಯಲ್ಲಿ ಆರ್‌ಎಸ್‌ಎಸ್ ಸಂಚಾಲಕನಿಂದ ‘ರಾಷ್ಟ್ರಧ್ವಜಾರೋಹಣ’..!
ಹನುಮಧ್ವಜ ವಿವಾದದಿಂದ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇದೆ. ಇದೇ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಆರ್‌ಎಸ್‌ಎಸ್ ಸಂಚಾಲಕನಿಂದ ಧ್ವಜಾರೋಹಣ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ನಿಯಮಾವಳಿ ಉಲ್ಲಂಘಿಸಿ ಒಂದು ಧರ್ಮದ ಪರ ಒಲವು ತೋರಿರುವ ಬಗ್ಗೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಸ್ತ್ರೀ ಶಕ್ತಿ, ಸ್ವ-ಸಹಾಯ ಸಂಘ ನಡೆಸುವುದು ಸುಲಭದ ಮಾತಲ್ಲ: ತ್ರಿನೇತ್ರ ಶಿವಯೋಗಿ ಸ್ವಾಮೀಜಿ
ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಗವಂತನ ಬಗ್ಗೆ ಉತ್ತಮ ಸಂದೇಶ ನೀಡುತ್ತವೆ. ಧಾರ್ಮಿಕ ಚಿಂತನೆಗಳ ಪಾಲನೆಯಿಂದಾಗಿ ಸಮಾಜದಲ್ಲಿ ಶಾಂತಿ, ಶಿಸ್ತುಬದ್ಧ ಜೀವನ, ಸಾಮರಸ್ಯ, ಸಹೋದರತ್ವ ಭಾವನೆ, ಸಹಬಾಳ್ವೆಯಂಥಹ ಗುಣಗಳು ಬೆಳೆಯುತ್ತವೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ವೀರೇಂದ್ರ ಹೆಗ್ಗಡೆಯವರ ಚಿಂತನೆಗಳಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಬದುಕು ಹಸನಾಗುತ್ತಿದೆ.
‘ಮಂಡ್ಯ ಬಂದ್’ ನಡೆಸದಂತೆ ಸಂಘಟಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ
ಇತ್ತ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜಸ್ತಂಭದ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಫೆ.7ರಂದು ಹಾಗೂ 9 ರಂದು ಮಂಡ್ಯ ಬಂದ್ ಮಾಡದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರೆ, ಅತ್ತ ಕೆರಗೋಡು ಗ್ರಾಮದ ವಿವಾದಿತ ಧ್ವಜಸ್ತಂಭದ ಸ್ಥಳದಲ್ಲಿದ್ದ ಜೆಡಿಎಸ್ ನಾಯಕರ ಫ್ಲೆಕ್ಸ್ ಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಸೋಮವಾರ ತೆರವುಗೊಳಿಸಿದ್ದಾರೆ.
ಕೃಷಿ ಕೂಲಿಕಾರರಿಂದ ಚಿಕ್ಕರಸಿನಕೆರೆ ಗ್ರಾಪಂ ಎದುರು ಪ್ರತಿಭಟನೆ
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡದೆ ಅಧಿಕಾರಿಗಳು ಬೇಜಾವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಈ ಕೂಡಲೇ ಕೆಲಸ ನೀಡಬೇಕು ಎಂದು ಆಗ್ರಹ ತಾಪಂ ಇಒ ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೆ ಧರಣಿ ಕೈಬಿಡುವುದಿಲ್ಲವೆಂದು ಕೃಷಿ ಕೂಲಿಕಾರರು ಪಟ್ಟು.
ನಾಲೆಗಳಿಗೆ ನೀರು ಹರಿಸಿ, ಇಲ್ಲವಾದರೆ ಸಚಿವರಿಗೆ ಘೇರಾವ್‌: ರೈತರ ಎಚ್ಚರಿಕೆ
ಇತ್ತ ನಾಲೆಗಳಿಗೆ ನೀರು ಹರಿಸಿ ಜನ ಜಾನುವಾರುಗಳಿಗೆ ನೀರು ಕೊಡಿ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡರಿಗೆ ತಾಲೂಕು ರೈತ ಸಂಘದ ಕಾರ್ಯಕರ್ತರಿಂದ ಆಗ್ರಹ, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ, ಅತ್ತ ತಕ್ಷಣ ನಾಲೆಗಳ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರಿಂದ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಮಾಡಿ ಪ್ರತಿಭಟನೆ.
ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ಬಿ.ಆರ್.ಅಂಬೇಡ್ಕರ್ ಸಾಧನೆ ಅಮರ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
ರೈತಪರ ಧ್ವನಿಯಾಗಿದ್ದ ನಾಲ್ವಡಿಯವರು ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದ ಪರಿಣಾಮ ನೀರಾವರಿ ಕ್ಷೇತ್ರ ಶ್ರೀಮಂತಗೊಂಡು, ಜಿಲ್ಲೆಯ ರೈತರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಮೈಸೂರು ಸಂಸ್ಥಾನದಲ್ಲಿ ಮೊದಲ ಬಾರಿಗೆ ಮೀಸಲಾತಿ ಆರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವಿಶ್ವದ ಹಲವು ಸಂವಿಧಾನಗಳನ್ನು ಅಧ್ಯಯನ ಮಾಡಿ ಈ ದೇಶದಲ್ಲಿ ವಾಸಿಸುವ ಎಲ್ಲ ಬಗೆಯ ಧರ್ಮ ಮತ್ತು ವರ್ಗದ ಜನರಿಗೆ ಹಕ್ಕು ಅವಕಾಶ ನೀಡುವ ಸಮ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ.
ಬಳ್ಳೇಕೆರೆ ಕೆರೆಗೆ ಹರಿದ ಹೇಮಾವತಿ ನೀರು..!
ಬರಪೀಡಿತ ತಾಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಯ ಕೆರೆ-ಕಟ್ಟೆಗಳನ್ನುತುಂಬಿಸುವ ಕಟ್ಟಹಳ್ಳಿ (ಐಚನಹಳ್ಳಿ) ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡು ಪ್ರಾಯೋಗಿಕವಾಗಿ ಸೋಮವಾರ ಬಳ್ಳೇಕೆರೆ ಕೆರೆಗೆ ಹೇಮಾವತಿ ನದಿಯಿಂದ ನೀರನ್ನು ಹರಿಸಲಾಯಿತು.
11ಕ್ಕೆ ಫಲಾನುಭವಿಗಳ ಸಮಾವೇಶ: ಅರ್ಹರಿಗೆ ಸೌಲಭ್ಯ ವಿತರಣೆ: ಶಾಸಕ ಕೆ.ಎಂ.ಉದಯ್
ಸಮಾವೇಶದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಧಾನ ಮಂತ್ರಿಗಳ ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಸಹ ನೋಂದಣಿ ಕಾರ್ಯ ನಡೆಸಲಾಗುವುದು. ಸುಮಾರು ನೂರು ಮಂದಿ ಮಾಶಾಸನ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಹಕ್ಕು ಪತ್ರಗಳು ಹಾಗೂ ಸಾಗುವಳಿ ಚೀಟಿಗಳನ್ನು ವಿಚರಿಸಲಾಗುವುದು. ವಿವಿಧ ಇಲಾಖೆಯ ಸ್ಟಾಲ್‌ಗಳನ್ನು ನಿರ್ಮಿಸಿ ರೈತರಿಗೆ ಸೌಲಭ್ಯಗಳ ಸಿಗುವ ಬಗ್ಗೆ ಮಾಹಿತಿ ನೀಡಲಾಗುವುದು.
ನೀರಿನ ಅಭಾವದಲ್ಲೂ 9.35 ಲಕ್ಷ ಟನ್ ಕಬ್ಬು ಅರೆದು ಯಶಸ್ವಿ..!
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರಸಕ್ತ ಸಾಲಿನಲ್ಲಿ 33 ಬ್ಯಾಚ್‌ಗಳಿಗೂ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ 2984 ರು. ರೈತರಿಗೆ ಸಕಾಲಕ್ಕೆ ಬಟವಾಡೆ ಮಾಡಿದೆ. ರೈತರಿಗೆ ಸಕಾಲಕ್ಕೆ ಕಬ್ಬಿನ ಹಣ ಪಾವತಿಸಿ ಕಾರ್ಖಾನೆ ರೈತರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು 6 ಬ್ಯಾಚ್‌ಗಳಿಗೆ ಮಾತ್ರ ಬಾಕಿ ಹಣ ನೀಡಬೇಕಾಗಿದೆ.
  • < previous
  • 1
  • ...
  • 756
  • 757
  • 758
  • 759
  • 760
  • 761
  • 762
  • 763
  • 764
  • ...
  • 814
  • next >
Top Stories
ಮಾಜಿ ಸಂಸದೆ ಸುಮಲತಾ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ..!
ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ
ಮೇಲ್ಮನೆಗೆ ಬಂದು ಹೋಯ್ತು ‘ನಿಗೂಢ’ ನಾನ್‌ಸ್ಟಾಪ್‌ ರೈಲು!
ದಿ ಗ್ರೇಟ್‌ ಪೂಜಾರ ಕ್ರಿಕೆಟ್‌ಗೆ ವಿದಾಯ : ದ್ರಾವಿಡ್‌ ಬಳಿಕ ಭಾರತಕ್ಕೆ ‘ಗೋಡೆ’ಯಾಗಿದ್ದ ಪೂಜಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved