ಮಂಡ್ಯ ಜಿಲ್ಲೆಗೆ ವಿವೇಕವಿರುವ ನಾಯಕತ್ವ ಕೊರತೆ: ಪಿ.ಜಿ.ಆರ್.ಸಿಂಧ್ಯಮಂಡ್ಯ ಜಿಲ್ಲೆಯಲ್ಲಿ ಮಂಚೇಗೌಡ, ಎಸ್.ಎಂ.ಲಿಂಗಪ್ಪ, ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಚೌಡಯ್ಯ ಸೇರಿದಂತೆ ಹಲವು ಮಹನೀಯರ ಜೊತೆ ಕೆಲಸ ಮಾಡುವ ಸೌಭಾಗ್ಯ ನನ್ನದಾಗಿತ್ತು. ಇದೆಲ್ಲದರ ನಡುವೆ ವಿವೇಕ ಎನ್ನುವುದಿತ್ತು. ಮಂಡ್ಯದಲ್ಲಿ ಧರಣಿಯಾಗುತ್ತದೆ ಎಂದರೆ ಕೇವಲ ವಿಧಾನಸೌಧ ಅಲ್ಲ. ಬೆಂಗಳೂರು ಅಷ್ಟೇ ಅಲ್ಲ ಇಡೀ ದೇಶವೇ ತಿರುಗಿ ನೋಡುತ್ತಿತ್ತು. 2000ರ ನಂತರ ವಿವೇಕವನ್ನು ಬೆಳೆಸಿಕೊಳ್ಳುವ ಒಂದು ನಾಯಕತ್ವ ಕೊಡಬೇಕಿತ್ತು.