ಸಾರಾಂಶ
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮನುಕುಲ ಉದ್ಧಾರ ಸಂದೇಶ ನಾರಾಯಣ ಗುರುಗಳು ನೀಡಿದ್ದಾರೆ
ಕುಕನೂರು: ನಾರಾಯಣ ಗುರುಗಳ ತತ್ವ, ಸಂದೇಶಗಳು ಸಮಾಜವನ್ನು ಮುನ್ನೆಡೆಸುತ್ತಿವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದಲ್ಲಿ ಆರ್ಯ ಈಡಿಗ ಸಮಾಜದಿಂದ ಜರುಗಿದ ಬ್ರಹ್ಮ ಶ್ರೀನಾರಾಯಣ ಗುರುಗಳ 171 ನೇ ಜಯಂತಿಯ ನಿಮಿತ್ತ ಜರುಗಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು, ನಾರಾಯಣ ಗುರುಗಳು ಶೈಕ್ಷಣೀಕವಾಗಿ ಕ್ರಾಂತಿ ಮಾಡಿದರು. ಧರ್ಮದ ಉಳಿವಿಗಾಗಿ ಶ್ರಮಿಸಿದರು. ಜಾತಿ ತಾರತಮ್ಯ ಹೋಗಲಾಡಿಸಿದರು. ನಾರಾಯಣ ಗುರುಗಳ ತತ್ವ, ಸಂದೇಶ ಪ್ರತಿಯೊಬ್ಬರು ಅಧ್ಯಯನ ಮಾಡಬೇಕು. ಸಮ ಸಮಾಜದ ಹಾದಿಯಲ್ಲಿ ಸಾಗಬೇಕು ಎಂದರು.ಮೆರವಣಿಗೆಯಲ್ಲಿ ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ, ಶಿವಕುಮಾರ ನಾಗಲಾಪೂರಮಠ, ಹನುಮಂತಪ್ಪ ಹಂಪನಾಲ ಸೇರಿದಂತೆ ಈಡಿಗ ಸಮಾಜದ ಮುಖಂಡರಿದ್ದರು.
ನಂತರ ಪಟ್ಟಣದ ಮಗಜಿ ಮಂಗಳ ಭವನದಲ್ಲಿ ಜಯಂತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದ ಪಪಂ ಮಾಜಿ ಸದಸ್ಯ ಹನುಮಂತಪ್ಪ ಹಂಪನಾಳ, ಈಡಿಗ ಸಮಾಜ ಸಣ್ಣ ಸಮಾಜವಾದರು ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದ ಸಮಾಜವಾಗಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮನುಕುಲ ಉದ್ಧಾರ ಸಂದೇಶ ನಾರಾಯಣ ಗುರುಗಳು ನೀಡಿದ್ದಾರೆ. ಎಲ್ಲರ ಹಾಗೇ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಎಂದು ಸಾರಿದ್ದಾರೆ ಎಂದರು.ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ ಮಾತನಾಡಿ, ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಜಾತೀಯ ವಿಷ ಭಾವನೆಗಳನ್ನು ಬಿತ್ತಿ, ನಮ್ಮ ಧರ್ಮ, ನಮ್ಮ ಸಿದ್ಧಾಂತ ಎನ್ನುತ್ತಾ ಮತಭ್ರಾಂತಿಯಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಅವನವನ ಆತ್ಮಸುಖಕ್ಕಾಗಿ ಗೈಯುವ ಕರ್ಮಗಳೆಲ್ಲವೂ ಮತ್ತೊಬ್ಬರ ಹಿತ ಕಾಪಾಡಲಿ ಎಂದು ನಾರಾಯಣ ಗುರುಗಳ ಹೇಳಿದ್ದಾರೆ ಎಂದರು.
ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ ತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ, ಪ್ರಮುಖರಾದ ಹನುಮಗೌಡ, ರಾಮಣ್ಣ ಚಂಡೂರು, ಕನಕಪ್ಪ ಗಾವರಳ, ದೇವಪ್ಪ ಈಳಿಗೇರ್, ಕಾಶಿವಿಶ್ವನಾಥ ಬಿಚ್ಚಾಲಿ, ಮಂಜು ಈಳಿಗೇರ್, ಶೇಖರ್ ಈಳಿಗೇರ್, ವೆಂಕಟೇಶ್ ಗಂಗಾವತಿ, ರಾಧಾ ಈಳಿಗೇರ್, ರೇಣುಕಾ ಈಳಿಗೇರ್, ರವೀಂದ್ರ ಕುದರಿಮೋತಿ, ಕನಕಪ್ಪ ಕಲಭಾವಿ ಇತರರಿದ್ದರು.