ಡಿ.7ರಂದು 2ನೇ ಉಡುಪಿ ಮ್ಯಾರಥಾನ್‌

| Published : Oct 18 2025, 02:02 AM IST

ಸಾರಾಂಶ

ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ನಗರದ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದಲ್ಲಿ 2ನೇ ವರ್ಷದ ಉಡುಪಿ ಮ್ಯಾರಥಾನ್ ಡಿ. 7ರಂದು ಆಯೋಜಿಸಲಾಗಿದೆ.

ಉಡುಪಿ: ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ನಗರದ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದಲ್ಲಿ 2ನೇ ವರ್ಷದ ಉಡುಪಿ ಮ್ಯಾರಥಾನ್ ಡಿ. 7ರಂದು ಆಯೋಜಿಸಲಾಗಿದೆ.

ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮತ್ತು ರನ್ನರ್ಸ್ ಕ್ಲಬ್‌ ಅಧ್ಯಕ್ಷ ಡಾ. ತಿಲಕ್ ಚಂದ್ರ ಪೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಈ ಬಾರಿ ಮ್ಯಾರಾಥಾನ್ ಆರೋಗ್ಯಕರ ಹೃದಯ - ಆರೋಗ್ಯಕರ ಕುಟುಂಬ ಎಂಬ ಧ್ಯೇಯವಾಕ್ಯದೊಂದಿಗೆ ಈ ಮ್ಯಾರಾಥಾನ್ ನಡೆಯಲಿದೆ. ಜನರು ತಮ್ಮ ತಪ್ಪು ಜೀವಶೈಲಿ ಬದಲಾಯಿಸಿ ಸರಿಯಾದ ಜೀವನ ಶೈಲಿ ಅಳವಡಿಸಿಕೊಂಡು ಹೃದ್ರೋಗ ಮತ್ತು ಇತರ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಉತ್ತೇಜಿಸುವುದು ಇದರ ಉದ್ದೇಶವಾಗಿದೆ ಎಂದವರು ಹೇಳಿದರು.

ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವಿವಿಧ ವಯೋಮಾನದಲ್ಲಿ, 21 ಕಿ.ಮೀ., 10 ಕಿಮೀ, 5 ಕಿಮೀ. 3 ಕಿಮೀ ಮತ್ತು ಫನ್ ರನ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಜೊತೆಗೆ ಮಹಿಳೆಯರ ದೈಹಿಕ ಕ್ಷಮತೆ ಮತ್ತು ಸಾಂಸ್ಕೃತಿಕತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ಯಾರಿ ರನ್ ಎಂಬ ಹೊಸ ವಿಭಾಗವನ್ನೂ ಈ ಬಾರಿ ಸೇರಿಸಲಾಗಿದೆ. ಈ ಎಲ್ಲಾ ವಿಭಾಗಗಳಲ್ಲಿ ಮೊದಲ 5 ಸ್ಥಾನ ವಿಜೇತರಿಗೆ ನಗದು ಬಹುಮಾನವಿದೆ. ಈ ಬಾರಿ ದೇಶವಿದೇಶಗಳಿಂದ 3,000ಕ್ಕೂ ಅಧಿಕ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರನ್ನರ್ಸ್ ಕ್ಲಬ್ ಕಾರ್ಯದರ್ಶಿ ದಿವಾಕರ ಗಣಪತಿ ನಾಯಕ್, ಓಟ ನಿರ್ದೇಶಕ ದಿವ್ಯೇಶ್ ಶೆಟ್ಟಿ, ಐಎಂಎ ಅಧ್ಯಕ್ಷ ಡಾ. ಅಶೋಕ್ ಉಪಸ್ಥಿತರಿದ್ದರು.