ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಪ್ಪ ವಿರುದ್ಧ ಬೋವಿ ಸಮಾಜದ ಆಕ್ರೋಶಬೋವಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬೋವಿ ಸಮಾಜದ ಮುಖಂಡ ನಾಗರಾಜ್ ಮಾತನಾಡಿ, "ಅಜ್ಜಪ್ಪ ಅವರು ಅಂಗಡಿಯಲ್ಲಿ ವ್ಯವಹಾರ ನಡೆಸಿದ ಬಳಿಕ ಮಾಲೀಕರಿಗೆ ಕೊಡಬೇಕಾದ ಹಣವನ್ನು ತಿರಸ್ಕರಿಸಿ, ‘ನಾನು ಈಗಾಗಲೇ ಹಣ ಕೊಟ್ಟಿದ್ದೇನೆ, ಉಳಿದ ಬಾಕಿಯಲ್ಲಿ ಅರ್ಧವನ್ನು ಮಾತ್ರ ಕೊಡುತ್ತೇನೆ ಎಂದು ಹೇಳಿದ್ದಾರೆ ಆದರೆ ಅದನ್ನು ತಿರಸ್ಕರಿಸಿ ಅಂಗಡಿ ಮಾಲೀಕರು ಹಣಕ್ಕಾಗಿ ಒತ್ತಾಯಿಸಿದಾಗ, ಅಜ್ಜಪ್ಪ ಅವರು ನಿಮ್ಮ ಮೇಲೆ ವಡ್ಡನನ್ನು ಕರೆಸಿ ಅಟ್ರಾಸಿಟಿ ಕೇಸ್ ಹಾಕಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಇಂತಹ ನಡವಳಿಕೆಯಿಂದ ಸಮಾಜದ ಹೆಸರಿಗೆ ಧಕ್ಕೆಯಾಗಿದ್ದು, ಈ ರೀತಿಯ ವ್ಯಕ್ತಿಯಿಂದ ನಮ್ಮ ಬೋವಿ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.