ಆರೋಗ್ಯ ರಕ್ಷಿಸುವ ಪೌರ ಕಾರ್ಮಿಕರ ನಿಂದನೆ ಸಲ್ಲ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿಊರಿನ ಸ್ವಚ್ಛತೆ ಜತೆಗೆ ಜನಾರೋಗ್ಯ ಕಾಪಾಡಲು ತಮ್ಮ ವೈಯಕ್ತಿಕ ಬದುಕು, ಆರೋಗ್ಯವನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ನಿಂದಿಸುವ ಕೆಲಸವು ಕೆಲವರಿಂದ ಆಗುತ್ತಿದ್ದು, ಅಂತಹ ಘಟನೆಗಳು ಮೊದಲು ನಿಲ್ಲಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.