ಶಸ್ತ್ರಚಿಕಿತ್ಸೆಗಾಗಿ ಎಡಗಾಲಿನ ಬದಲು ಬಲಗಾಲನ್ನು ಕೊಯ್ದ ಹಿಮ್ಸ್ ವೈದ್ಯಎಡಗಾಲಿನ ಶಸ್ತ್ರಚಿಕಿತ್ಸೆ ಮಾಡುವ ಬದಲು ಬಲಗಾಲಿನ ಶಸ್ತ್ರಚಿಕಿತ್ಸೆ ಮಾಡಿದ ಎಡವಟ್ಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಅವರು ಆಸ್ಪತ್ರೆಗೆ ಭೇಟಿ ನೀಡಿ, ಎಡಗಾಲಿನ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಜ್ಯೋತಿ ಎಂಬ ೨೮ ವರ್ಷದ ಮಹಿಳೆಯನ್ನು ಭೇಟಿ ಮಾಡಿ ರೋಗಿಗೆ ಧೈರ್ಯ ತುಂಬಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ಇಂತಹ ನಿರ್ಲಕ್ಷ್ಯದಿಂದ ಹಿಮ್ಸ್‌ನ ಹೆಸರಿಗೂ ಧಕ್ಕೆಯಾಗಿದೆ. ಈ ತಪ್ಪಿಗೆ ಕಾರಣರಾದ ವೈದ್ಯ ಸಂತೋಷ್‌ರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದರು.