ಹುಬ್ಬಳ್ಳಿ ಸಮಾವೇಶ ಸೂಕ್ತ ಸಂದೇಶ ನೀಡುವಲ್ಲಿ ವಿಫಲ-ಅನ್ನದಾನೀಶ್ವರ ಸ್ವಾಮೀಜಿಹುಬ್ಬಳ್ಳಿಯಲ್ಲಿ ಜಗದ್ಗುರುಗಳು, ಮಠಾಧೀಶರು ಮತ್ತು ಸಮಾಜದ ತಂದೆ-ತಾಯಿಗಳು ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡು ಏಕತೆಯ ಭಾವ ಪ್ರದರ್ಶಿಸಿರುವುದು ಸ್ವಾಗತಾರ್ಹ. ಆದರೆ, ಜಾತಿಗಣತಿ ಕುರಿತಂತೆ ಜನತೆಗೆ ಸೂಕ್ತ ಸಂದೇಶ ರವಾನಿಸುವಲ್ಲಿ ವಿಫಲವಾಯಿತು ಎಂದು ಮುಂಡರಗಿ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ವಿಷಾಧಿಸಿದರು.