ಬಿಜೆಪಿ ಕೋಟೆ ಭೇದಿಸಲು ಕಾಂಗ್ರೆಸ್ ಸನ್ನದ್ಧ: ಆಯನೂರು ಮಂಜುನಾಥರಾಜ್ಯದಲ್ಲಿ ಬಿಜೆಪಿ ಸ್ವಲ್ಪವಾದರೂ ಬೆಳೆದಿದ್ದರೆ ಅದಕ್ಕೆ ವಿಧಾನ ಪರಿಷತ್ ಚುನಾವಣೆಗಳೇ ಕಾರಣ. ಆದರೆ ಪದವೀಧರ ಮತ್ತು ಶಿಕ್ಷಕರ ಪ್ರಜ್ಞಾವಂತ ಮತದಾರರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದ ಕಾರಣ ಇತ್ತೀಚಿನ ದಿನಗಳಲ್ಲಿ ಪರಿಷತ್ ಚುನಾವಣೆಗಳಲ್ಲೂ ಸೋಲುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಕಾರ್ಮಿಕರು, ನೌಕರರು ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ವಿರೋಧಿ ನಿಲುವುಗಳ ತೆಗೆದುಕೊಂಡ ಪರಿಣಾಮ ತಾವು ಅವಧಿಗೂ ಮೊದಲೇ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.