ನರೇಗಾ ಕೂಲಿ ಮಕ್ಕಳಿಗೆ ಕೂಸಿನ ಮನೆ ವರನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿನಿಂದ 3 ವರ್ಷದ ಶಿಶುಗಳನ್ನು ವ್ಯವಸ್ಥಿತ ಪಾಲನೆ, ಪೋಷಣೆ ಮಾಡುವ ಉದ್ದೇಶದಿಂದ ಕೂಸಿನ ಮನೆ ಎಂಬ ವಿಶೇಷ ಯೋಜನೆ ಈಗಾಗಲೇ ಜಾರಿಗೊಳಿಸಲಾಗಿದೆ. ಈ ಯೋಜನೆ ಇದೀಗ ಕೂಲಿಕಾರ ಮಕ್ಕಳಿಗೆ ಆಸರೆಯಾಗಿದೆ. ಇಂಡಿ ತಾಲೂಕಿನ 38 ಗ್ರಾಪಂನಲ್ಲಿ 31 ಗ್ರಾಮಗಳಲ್ಲಿ ಕೂಸಿನ ಮನೆ ಯೋಜನೆ ಅನುಷ್ಠಾನಕ್ಕೆ ತಂದು 392 ಮಕ್ಕಳಿಗೆ ವರವಾಗಿದೆ.