ಗ್ರಾಪಂ ಅಧ್ಯಕ್ಷರು ಕ್ರಿಯಾಶೀಲರಾದಲ್ಲಿ ಅಭಿವೃದ್ಧಿ ಸಾಧ್ಯಸೋಮವಾರ ರೋಣ ತಾಪಂ ಸಭಾ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ರೋಣ-ಗಜೇಂದ್ರಗಡ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜರುಗಿದ ತರಬೇತಿ ಕಾರ್ಯಾಗಾರದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಶ್ಯಾಮ ಸುಂದರ ಪಾಲಿವಾಲ ಗ್ರಾಪಂ ಅಧ್ಯಕ್ಷರ ಜೊತೆಗೆ ಸಮಾಲೋಚನೆ ಹಾಗೂ ಸಂವಾದ ನಡೆಸಿ ಮಾತನಾಡಿದರು.