ಸಾಧನೆ ಎಂಬುದಕ್ಕೆ ಭಗೀರಥ ಮಹರ್ಷಿಯೇ ನಿದರ್ಶನ: ಟಿ.ಜೆ. ಸುರೇಶ್ ಆಚಾರ್ರಾಮಾಯಣದ ಬಾಲಕಾಂಡದಲ್ಲಿ ಭಗೀರಥ ಮಹರ್ಷಿಯ ಕತೆ ಬರಲಿದೆ. ಗುರುಭಕ್ತಿಗೆ ಏಕಾಗ್ರತೆ, ತಪೋನಿಷ್ಠೆಯಿಂದಾಗಿ ಭಗೀರಥ ಕಂಗೊಳಿಸುತ್ತಾರೆ. ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದ ಕೀರ್ತಿಗೆ ಪಾತ್ರರಾಗಿರುವ ಭಗೀರಥ ಅವರ ಪ್ರಯತ್ನಶೀಲತೆಯು ಭಗೀರಥ ಪ್ರಯತ್ನವೆಂಬ ನುಡಿಗಟ್ಟಾಗಿ ಕನ್ನಡಿಗರೆಲ್ಲರ ಸ್ಫೂರ್ತಿಯ ನೆಲೆಯಾಗಿದೆ.