ಹಿಂಗ್ ನಿರ್ಲಕ್ಷ್ಯ ಮಾಡಿದ್ರ, ದಿನಾ ರೈತರ ಆತ್ಮಹತ್ಯೆ ನಡೆದ್ರೂ ಆಶ್ಚರ್ಯ ಪಡಬ್ಯಾಡ್ರಿಮಳಿಯಂತೂ ಸಂಪೂರ್ಣ ಹೋಗಿಬಿಟ್ಟೈತಿ, ಗ್ಯಾರಂಟಿ ಯೋಜನೆ ಜಾರಿ ಮಾಡಿಂದ, ಹೊಲಕ್ ಆಳ ಬರವಲ್ಲವು, ಅಲ್ಪ ಸ್ವಲ್ಪ ನೀರಾವರಿ ಇರುವವ್ರಿಗೂ ಕರೆಂಟ್ ಇಲ್ಲಾ ಹಿಂಗಾದ್ರ ಬದುಕು ಹ್ಯಾಂಗ್ರೀ ಯಪ್ಪಾ... ಸರ್ಕಾರದವರು ಹಿಂಗ್ ನಮ್ಮ ಬಗ್ಗೆ ನಿರ್ಲಕ್ಷ್ಯ ಮಾಡಿದ್ರ ದಿನಾಲೂ ರೈತ ಆತ್ಮಹತ್ಯೆ ನಡೆದ್ರೂ ಆಶ್ಚರ್ಯ ಪಡಬ್ಯಾಡ್ರಿ ಎಂದು ಜಿಲ್ಲೆಯಲ್ಲಿ ಶನಿವಾರ ಬರ ಅಧ್ಯಯನ ನಡೆಸಿದ ಬಿಜೆಪಿ ತಂಡಕ್ಕೆ ರೈತರು ಎಚ್ಚರಿಸಿದರು.