ನಗರಸಭೆ ಸ್ವತ್ತುಗಳ ರಕ್ಷಣೆಗೆ ಕ್ರಮ ಅಗತ್ಯದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಆಗಿರುವ ಬಡಾವಣೆಗಳಲ್ಲಿ ನಗರಸಭೆಗೆ ಮೀಸಲಿರಿಸಲಾಗಿದ್ದ ಸಿಎ ನಿವೇಶನ ಮತ್ತು ಪಾರ್ಕ್ಗಳು ಮಾಯವಾಗುತ್ತಿವೆ. ಸಿಎ ನಿವೇಶನ ಬಳಿ ನಗರಸಭೆ ವತಿಯಿಂದ ಸೂಚನ ಫಲಕ ಹಾಕಿಸಬೇಕು. ಇವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.