ಬೀದಿ ನಾಯಿಗಳಿಗೆ ‘ಸಂತಾನ ಶಕ್ತಿ ಹರಣ’ ಚಿಕಿತ್ಸೆ..!ಬೆಂಗಳೂರಿನ ಕೇರ್ ಫಾರ್ ವಾಯ್ಸ್‌ಲೆಸ್ ಅನಿಮಲ್ಸ್ ತಂಡದಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಡಾ. ಅಭಿಲಾಷ್ ನೇತೃತ್ವದ ಎರಡು ತಂಡ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದೆ. ಒಂದು ನಾಯಿಗೆ ಸಂತಾನ ಶಕ್ತಿ ಹರಣ ಮಾಡಿ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ನೀಡುವುದಕ್ಕೆ ೧೭೩೧ ರು. ವೆಚ್ಚ ಮಾಡಲಾಗುತ್ತಿದೆ. ಅಂದರೆ, ೧೭೦೦ ನಾಯಿಗಳಿಗೆ ೨೮,೪೨,೭೦೦ ರು.ಗಳನ್ನು ನಗರಸಭೆ ವೆಚ್ಚ ಮಾಡುತ್ತಿದೆ.