ಇಂದು ಮತದಾನ; ತಪ್ಪದೇ ಹಕ್ಕು ಚಲಾಯಿಸಿನೂರಾರು ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸರದಿ ಬರುವವರೆಗೂ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಎರಡು ಇವಿಎಂ, ವಿವಿ ಪ್ಯಾಟ್, ಕಂಟ್ರೋಲಿಂಗ್ ಯುನಿಟ್, ಶಾಯಿ, ಸಮೇತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆದೊಯ್ಯಲು ನೂರಾರು ಕೆಎಸ್‍ಆರ್‌ಟಿಸಿ ಬಸ್‌ಗಳು ಕಾಯುತ್ತಿದ್ದವು. ಸಂಜೆಯೊಳಗೆ ಮತಗಟ್ಟೆಗಳಿಗೆ ನಿಯೋಜಿಸಿದ ಸಿಬ್ಬಂದಿ ತಲುಪಿದರು.