ಇಳಕಲ್ಲ ಸೀರೆಯಂತೆ ಕಂಗೊಳಿಸುತ್ತಿರುವ ಸಖಿ ಮತಗಟ್ಟೆಇಳಕಲ್ಲ: ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇಳಕಲ್ಲ ನಗರಸಭೆಯಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆ ವಿ಼ಶೇಷ ಅಲಂಕಾರದಿಂದ ಕಂಗೊಳಿಸುತ್ತಿದೆ.ಮತಗಟ್ಟೆಯನ್ನು ಇಳಕಲ್ಲ ಸೀರೆಗಳಿಂದ ಅಲಂಕಾರ ಮಾಡಲಾಗಿದ್ದು, ಇಳಕಲ್ಲ ನಗರದ ನೇಕಾರರ ಬಳಿ ಸಂಗ್ರಹಿಸಿದ ಸೀರೆಗಳನ್ನಿಟ್ಟು ಸಿಂಗಾರ ಮಾಡಿದ್ದಾರೆ. ಜೊತೆಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಇಳಕಲ್ಲ ಸೀರೆಯುಟ್ಟು ಕೈ ಮುಗಿದು ಮತದಾರರನ್ನು ಸ್ವಾಗತಿಸಲಿದ್ದಾರೆ.