೪ ತಿಂಗಳಲ್ಲಿ ದಾಖಲೆಯ ೧೦೩೮ ಅಗ್ನಿ ಅವಘಡಗಳು..!ಮಂಡ್ಯ ಜಿಲ್ಲಾ ಅಗ್ನಿ ಶಾಮಕ ದಳದ ಮಾಹಿತಿಯನುಸಾರ ಜನವರಿಯಲ್ಲಿ ೮೯, ಫೆಬ್ರವರಿಯಲ್ಲಿ ೨೪೬, ಮಾರ್ಚ್‌ನಲ್ಲಿ ೩೩೧, ಏಪ್ರಿಲ್‌ನಲ್ಲಿ ೩೬೭ ಅಗ್ನಿ ಅವಘಡಗಳು ಸಂಭವಿಸಿರುವುದಾಗಿ ತಿಳಿಸಿವೆ. ಈ ಅಗ್ನಿ ದುರಂತ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು, ೬ ಪ್ರಾಣಿಗಳು ಮೃತಪಟ್ಟಿವೆ. ೮.೩೪ ಕೋಟಿ ರು. ಮೌಲ್ಯದ ಆಸ್ತಿ ನಾಶವಾಗಿದ್ದರೆ, ೧೯.೫೬ ಕೋಟಿ ರು. ಮೌಲ್ಯದ ಆಸ್ತಿಯನ್ನು ಸಂರಕ್ಷಿಸಿರುವುದಾಗಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.