ಬೇಸಿಗೆ ಶಿಬಿರ: ಮಕ್ಕಳೊಂದಿಗೆ ನ್ಯಾ.ದೇವದಾಸ್ ಸಂವಾದಹೊನ್ನಾಳಿಯ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಮಕ್ಕಳ ಕಲರವ ಕಂಡುಬಂತು. ಶ್ರೀ ಚನ್ನಪ್ಪಸ್ವಾಮಿ ಜನ ಕಲ್ಯಾಣ ಟ್ರಸ್ಟ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಮಾಸ್ಟರ್ಸ್ ಕ್ರಿಯೇಟಿವ್ ಲರ್ನಿಂಗ್ ಸಿಸ್ಟಮ್ಸ್ ಅಬಾಕಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಶಿಬಿರಾರ್ಥಿಗಳು ಕೋರ್ಟ್ ಕಲಾಪ ವೀಕ್ಷಣೆಗೆ ಮತ್ತು ನ್ಯಾಯಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕತೆಯಿಂದ ಆಗಮಿಸಿದ್ದರು.