ಇಂದು ಶ್ರೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವಶ್ರೀ ನರಸಿಂಹಸ್ವಾಮಿ ದೇವರಿಗೆ 8 ಕೈಗಳು, ಮೂರು ಕಣ್ಣುಗಳು ಇದ್ದು. ಎಂಟು ಕೈಗಳ ಪೈಕಿ ಎರಡು ಕೈಗಳಿಂದ ತೊಡೆಯ ಮೇಲೆ ಮಲಗಿಸಿಕೊಂಡಿರುವ ಹಿರಣ್ಯಕಶಿಪುವಿನ ಕರುಳನ್ನು ಬಗೆಯುತ್ತಲೂ, ಮತ್ತೆರಡು ಕೈಗಳಲ್ಲಿ ಈ ಕರುಳನ್ನು ಮಾಲೆಯಾಗಿ ಹಾಕಿಕೊಳ್ಳುತ್ತಲೂ, ಇನ್ನೆರಡು ಕೈಗಳಲ್ಲಿ ಪಾಶಾಕುಶ ಗಳನ್ನು ಹೊಂದಿದ್ದು. ಉಳಿದ ಎರಡು ಕೈಗಳಲ್ಲಿ ಶಂಕಚಕ್ರದಾರಿಯಾಗಿ ಅವತರಿಸಿರುವುದನ್ನು ಕಾಣಬಹುದಾಗಿದೆ. ಶ್ರೀ ನರಸಿಂಹ ಸ್ವಾಮಿ ಮೂಲ ವಿಗ್ರಹದ ಎಡ ಭಾಗದಲ್ಲಿ ಗರುಡ ಮತ್ತು ಬಲಭಾಗದಲ್ಲಿ ಭಕ್ತ ಪ್ರಹ್ಲಾದನ ಮೂರ್ತಿ ಇದೆ. ವಿಗ್ರಹದ ಮೂರನೇ ಕಣ್ಣು ಹಿರಣ್ಯಕಶಿಪುವಿನ ಸಂಹಾರ ಕಾಲದಲ್ಲಿ ಉದ್ಭವಾಯಿತು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.