ಮೂಲ ಸಂಪನ್ಮೂಲಗಳ ಜಾಗೃತಿಗೆ ಮುಂದಾದ ವಾಲ್ಮಿರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಡಿಯಲ್ಲಿ ವಿಶ್ವ ಬ್ಯಾಂಕಿನ ನೆರವಿನಿಂದ 1985ರಲ್ಲಿ ಆರಂಭಗೊಂಡ "ವಾಲ್ಮಿ " ಬದುಕಿನ ಮೂಲ ಸಂಪನ್ಮೂಲಗಳಾದ ಜಲ, ನೆಲ ಅಭಿವೃದ್ಧಿ, ಸಂರಕ್ಷಣೆ ಹಾಗೂ ನಿರ್ವಹಣೆ ವಿಷಯಗಳಲ್ಲಿ ಭಾಗೀದಾರರಾದ ರೈತರ ಮತ್ತು ಅಭಿಯಂತರರ ಸಾಮರ್ಥ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದೆ.