ಈ ಬಾರಿ ಸರಳ ಚಾಮರಾಜನಗರ ದಸರಾ ಉತ್ಸವ: ಸಚಿವ ವೆಂಕಟೇಶ್ಈ ಬಾರಿಯ ದಸರಾ ಸಂತೋಷ ಸಂಭ್ರಮದಿಂದ ಆಚರಿಸುವ ದಸರಾ ಆಗಿಲ್ಲ. ಆದ್ದರಿಂದ ಈ ಬಾರಿಯದು ಸರಳ ದಸರಾ ಉತ್ಸವ ಆಗಿರಲಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು. ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಂಭಾಗದ ವೇದಿಕೆಯಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು