ಮಂಗಳಾದೇವಿ ಉತ್ಸವದಲ್ಲಿ ಮುಸ್ಲಿಮರು ವ್ಯಾಪಾರ ಮಾಡಿಯೇ ಸಿದ್ಧ: ಸುನಿಲ್ ಕುಮಾರ್ ಬಜಾಲ್ ಸವಾಲುಮುಸ್ಲಿಂ ವ್ಯಾಪಾರಿಗಳು ಹಾಗೂ ಈ ಸಮಿತಿ ಕಳೆದ ಹತ್ತು ದಿನಗಳಿಂದ ಅನುಮತಿಗಾಗಿ ಸುತ್ತಾಡುತ್ತಿದೆ. ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲಿಸಿದರೆ ಗೊತ್ತಾಗುತ್ತದೆ. ಈಗ ಯಾರಿಗೋ ಹರಾಜಿನಲ್ಲಿ ಅಂಗಡಿಗಳನ್ನು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿಗಳ ಮೊದಲು ನಮಗೆ ಬದುಕುವ ಗ್ಯಾರಂಟಿ ಕೊಡಿ, ಕೂಲಿ ಮಾಡಿ ಬದುಕುವ ನಮಗೆ ಬದುಕುವ ಹಕ್ಕು ಕಲ್ಪಿಸಿ. ಈ ಸರ್ಕಾರ ಕೂಡ ಕೋಮುವಾದಿಗಳ ಜತೆ ಸೇರಿಕೊಂಡಿದೆ.