ತಂತ್ರಜ್ಞಾನ ಬಳಸಿ ಜ್ಞಾನಮಟ್ಟ ಹೆಚ್ಚಿಸಿಕೊಳ್ಳಿ: ಪ್ರೊ.ಎನ್.ಕೆ. ಲೋಕನಾಥ್ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಕಲಿಕೆ ಬಹಳ ಮುಖ್ಯ. ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಸಬಾರದು. ಮೊಬೈಲ್ ಅನ್ನು ಮಾಹಿತಿಯ ಮೂಲವಾಗಿ ಬಳಸಿಕೊಳ್ಳಬೇಕೆ ಹೊರತು, ಅದೇ ಪ್ರಪಂಚವಾಗಬಾರದು. ತಂತ್ರಜ್ಞಾನವು ಜ್ಞಾನ ಹೆಚ್ಚಿಸುವ ಮೂಲವಾಗಬೇಕು. ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ಭಾಷಾ ಜ್ಞಾನ ಬೆಳೆಸಿಕೊಳ್ಳದಿದ್ದರೆ ಜೀವನ ಪರ್ಯಂತ ಕಾಗುಣಿತ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಹೆಚ್ಚು ಅಧ್ಯಯನದಲ್ಲಿ ತೊಡಗಬೇಕು.