ಮತದಾನ ಜಾಗೃತಿಗೆ ಚಾಲನೆಅಮೀನಗಡ: ಲೋಕಸಭಾ ಚುನಾವಣೆ ಹಿನ್ನೆಲೆ ಅಮೀನಗಡ ಹಾಗೂ ಕಮತಗಿ ಪಟ್ಟಣದ ಪ.ಪಂ, ನಾಡ ಕಾರ್ಯಾಲಯ ಹಾಗೂ ಮತಗಟ್ಟೆಗಳಿಗೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅಮೀನಗಡ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಮತಗಟ್ಟೆ ಕೊಠಡಿಗಳ ದುರಸ್ತಿ, ಶೌಚಾಲಯ ಹಗೂ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಲು ಸೂಚಿಸಿದರು.