ಘಟಪ್ರಭದಲ್ಲಿ ಹೋಳಿ ಸಂಭ್ರಮ ಜೋರುಘಟಪ್ರಭಾ: ಪಟ್ಟಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಆಚರಿಸಲಾಯಿತು. ತರಹೇವಾರಿ ತರಹದ ಬಣ್ಣಗಳನ್ನು ಎರಚುವ ಮೂಲಕ ಯುವಕ- ಯುವತಿಯರು, ಮಕ್ಕಳು ಹೋಳಿ ಹಬ್ಬದ ಶುಭಾಶಯ ಹೇಳುತ್ತ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಹೋಳಿ ಹುಣ್ಣಿಮೆಗೆ ಭಾನುವಾರದ ರಾತ್ರಿಯಿಂದಲೇ ಹಲಗೆ, ತಮಟೆ, ಬಾರಿಸುವುದರ ಜೊತೆಗೆ ರಾತ್ರಿಯೆಲ್ಲಾ ಜಾಗರಣೆ ಮಾಡಲಾಗಿತ್ತು.