ಶಿವರಾತ್ರಿ: ಕೋಟಿಲಿಂಗೇಶ್ವರದಲ್ಲಿ ಭಕ್ತರ ದಂಡುಶಿವರಾತ್ರಿ ಪ್ರಯುಕ್ತ ಶಿವಲಿಂಗಗಳ ದರ್ಶನಕ್ಕಾಗಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜ್ಯದ ನಾನಾ ಕಡೆಗಳಿಂದ ಭಕ್ತರ ಸಮೂಹವೇ ಹರಿದು ಬಂದಿತ್ತು. ಕೋಟಿಲಿಂಗಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ದೇವಾಲಯದಿಂದ ಸೂಕ್ತ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು, ಶಿವರಾತ್ರಿ ಪ್ರಯುಕ್ತ ಕೆಜಿಎಫ್, ಬಂಗಾರಪೇಟೆ, ಕೋಲಾರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ವಿಕೋಟದಿಂದ ಬರುವ ಭಕ್ತರಿಗೆ ರಾಜ್ಯ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.