ಪೋಲಿಯೊ ಲಸಿಕಾ ಕೇಂದ್ರಕ್ಕೆ ಸಿಂಗಾರಇಂಡಿ: ತಾಲೂಕಿನ ಚಿಕ್ಕಬೇವನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಲಸಿಕಾ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಬಾಳೆ ದಿಂಡು, ಕಬ್ಬುಮಾವಿನ ಎಲೆಗಳಿಂದ ಸಿಂಗರಿಸಿ ಅಲಂಕಾರ ಮಾಡಿ ಹಬ್ಬದ ವಾತಾವರಣವನ್ನೆ ಸೃಷ್ಟಿ ಮಾಡಲಾಗಿತ್ತು.