ಪುತ್ರನ ವಿರುದ್ಧ ಸುಖಾಸುಮ್ಮನೆ ಆರೋಪ: ಸಂಸದ ದೇವೇಂದ್ರಪ್ಪಕೊಳಾಳ್ ಗ್ರಾಮದ ಕಲ್ಲೇಶ್ ಎನ್ನುವನು ಆ ಯುವತಿಯನ್ನು ನನ್ನ ಪುತ್ರನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಬಳಿಕ ಈ ರೀತಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆಕೆ ಯಾರು ಎಂದು ನನಗೆ ಗೊತ್ತಿಲ್ಲ. ನಾನು ಬೆಂಗಳೂರಿನಿಂದ ಕರೆ ಮಾಡಿದ್ದು ಎಂದಿದ್ದಾರೆ. ಎಂಟು ದಿನಗಳ ಹಿಂದೆ ಆಕೆ ನನಗೆ ಕರೆ ಮಾಡಿದ್ದು, ಈಗ ಚುನಾವಣೆ ಹತ್ತಿರ ಬರುತ್ತಿದೆ. ಆದ್ದರಿಂದ ಈ ರೀತಿ ಕುಮ್ಮಕ್ಕು ಮಾಡಿದ್ದಾರೆ. ನನ್ನ ಘನತೆಗೆ ಕುಂದು ತರಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.