ವಿಶ್ವಕಪ್ ಗೆದ್ದು ಬಾ ಭಾರತ<bha>;</bha> ತಂಡಕ್ಕೆ ಶುಭ ಹಾರೈಕೆಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನನ್‌ನಲ್ಲಿ ಭಾರತ ತಂಡಕ್ಕೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಕ್ರಿಕೆಟ್ ಅಭಿಮಾನಿ ಬಳಗದ ವತಿಯಿಂದ ವಿಶ್ವಕಪ್ ಪೈನಲ್‌ನಲ್ಲಿ ಇಂಡಿಯಾ ಗೆದ್ದು ಬರಲಿ ಎಂದು ಭಾರತಮಾತೆಯ ಫೋಟೋ ಹಿಡಿದು ಪ್ರಾರ್ಥಿಸಿ ಭಾರತ ಕ್ರಿಕೆಟ್ ತಂಡದ ಆಟಗಾರಿಗೆ ನೈತಿಕವಾಗಿ ಬೆಂಬಲ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ, ಎಚ್.ಸಿ ಯೋಗೇಶ್, ಪ್ರಮುಖರಾದ ಕೆ.ದೇವೇಂದ್ರಪ್ಪ, ಶಾಮೀರ್ ಖಾನ್ , ಕಾಶಿ ವಿಶ್ವನಾಥ್, ಅಫ್ತಾಜ್ ಪರ್ವಿಜ್, ಐಎನ್‌ಟಿಸಿ ಅಧ್ಯಕ್ಷ ಕವಿತಾ, ಅರ್ಜುನ್ ಪಂಡಿತ್ , ನೂರುಲ್ಲಾ, ಅರ್ಜುನ್ ಮತ್ತಿತರರು ಇದ್ದರು.