ಕೊಪ್ಪಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ-ಸಚಿವ ಶಿವರಾಜ ತಂಗಡಗಿಕಾಂಗ್ರೆಸ್ ಸರ್ಕಾರದ ಹಲವಾರು ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ. ನಗರದ ದಿನದಿಂದ ದಿನಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಮಟ್ಟದಲ್ಲಿ ಅನುದಾನ ದೊರಕಿದೆ. ಹಲವಾರು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕೊಪ್ಪಳದ ಮೆಡಿಕಲ್ ಕಾಲೇಜಿಗೆ ಪರಿಷ್ಕೃತ ಅನುದಾನ ₹192 ಕೋಟಿ ಕೊಟ್ಟಿದ್ದೇವೆ. ತಾಲೂಕಿನ ಭಾಗ್ಯನಗರದ ಕುಡಿಯುವ ನೀರಿನ ವ್ಯವಸ್ಥೆಗೆ ಅಮೃತ ಯೋಜನೆಯಡಿ ₹108 ಕೋಟಿ ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಒಳಚರಂಡಿ ಮಾಡಲು ತಾವರಗೇರಾ, ಕೂಕನೂರು, ಕಾರಟಗಿ, ಯಲಬುರ್ಗಾ ನಾಲ್ಕು ನಗರಗಳನ್ನು ಆಯ್ಕೆ ಮಾಡಿದ್ದೇವೆ.