ವ್ಯಾಪಾರಿ ಮಳಿಗೆಯಾದ ಹಳೇ ಬಸ್ ನಿಲ್ದಾಣಗ್ರಾಮೀಣ ಬಸ್ ನಿಲ್ದಾಣವೆಂದೇ ಹೆಸರು ವಾಸಿಯಾದ ಶಿಗ್ಗಾಂವಿ ಹಳೇ ಬಸ್ ನಿಲ್ದಾಣ ಇದೀಗ ವಸತಿ ಕೇಂದ್ರ, ವ್ಯಾಪಾರಿ ಮಳಿಗೆಯಾಗಿ ಬದಲಾಗುತ್ತಿದೆ!ಸುಮಾರು ₹೩.೫ ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದುವರೆಗೂ ಬಸ್ ನಿಲ್ದಾಣದ ಒಳಗೆ ಒಂದೂ ಬಸ್ ಬಂದಿಲ್ಲ, ಹೋಗಿಲ್ಲ. ಇದು ಅಚ್ಚರಿಯಾದರೂ ಸತ್ಯ!