ಮೊದಲ ಕಂತಿನ ಪ್ರತಿ ಟನ್ ಕಬ್ಬಿಗೆ ₹3000ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮೊದಲ ಕಂತಿನ ರೂಪದಲ್ಲಿ ಪ್ರತಿ ಟನ್ ಕಬ್ಬಿಗೆ ₹3000 ದರವನ್ನು ಮತ್ತು 2ನೇ ಕಂತಿನಲ್ಲಿ ರೈತರಿಗೆ ನಷ್ಟವಾಗದ ರೀತಿಯಲ್ಲಿ ಹಾಗೂ ಸರ್ಕಾರದ ಎಫ್.ಆರ್.ಪಿ ದರದಂತೆ ನೀಡಲಾಗುವುದು ಎಂದು ಲೈಲಾ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ, ಶಾಸಕ ವಿಠ್ಠಲ ಹಲಗೇಕರ ಘೋಷಿಸಿದರು.