• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕುಟುಂಬ ಸಮೇತ ದೇವಿ ದರ್ಶನ ಪಡೆದ ಶಾಸಕ ಸ್ವರೂಪ್
ಶಾಸಕ ಎಚ್.ಪಿ. ಸ್ವರೂಪ್‌ ಸೋಮವಾರ ಕುಟುಂಬ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆದರು. ಜಿಲ್ಲಾಡಳಿತ ನಿಗದಿಪಡಿಸಿದ ಪ್ರೋಟೋಕಾಲ್ ವಾಹನದಲ್ಲೇ ಅವರು ದೇವಾಲಯಕ್ಕೆ ಆಗಮಿಸಿದ್ದು, ನಿಯಮಾನುಸಾರ ದೇವಿಯ ದರ್ಶನ ಪಡೆದು ಭಕ್ತಿಯ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಭಕ್ತರ ಸುಗಮ ಧರ್ಮದರ್ಶನಕ್ಕಾಗಿ ಗೋಲ್ಡ್ ಕಾರ್ಡ್ ವ್ಯವಸ್ಥೆ, ಭದ್ರತಾ ಕ್ರಮಗಳು, ಕುಡಿಯುವ ನೀರು, ವೈದ್ಯಕೀಯ ಸಹಾಯ ಸೇರಿದಂತೆ ಎಲ್ಲ ವ್ಯವಸ್ಥೆಗಳು ಶಿಸ್ತುಬದ್ಧವಾಗಿ ನಡೆದಿವೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ- ಉಪಾಧ್ಯಕ್ಷರಾಗಿ ಬಿ.ಎಂ.ಪ್ರಕಾಶ್, ಸಿ.ಧನರಾಜ್ ಅವಿರೋಧ ಆಯ್ಕೆ
ನಿವೃತ್ತ ಶಿಕ್ಷಕನಾಗಿದ್ದರೂ ಸಹಕಾರ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿ ರೈತರ ನಾಡಿಮಿಡಿತ ಅರಿತಿದ್ದೇನೆ. ತಾಲೂಕಿನ ರೈತರ ಅನುಕೂಲಕ್ಕಾಗಿ ಹಿರಿಯ ಸಹಕಾರಿ ಟಿ.ಎನ್.ಮಾದಪ್ಪಗೌಡರು ಸ್ಥಾಪಿಸಿರುವ ಈ ಸಂಸ್ಥೆ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಹೊಸ ಯೋಜನೆ ರೂಪಿಸಲಾಗುವುದು.
ರೈತನ ಮೇಲೆ ನಿವೃತ್ತ ಎಂಜಿನಿಯರ್‌ ದಬ್ಬಾಳಿಕೆ
ನಿವೃತ್ತ ಎಂಜಿನಿಯರ್ ರಮೇಶ್ ಕುಮಾರ್ ಎಂಬುವವರು ಒತ್ತುವರಿ ತೆರವು ಎಂಬ ನೆಪದಲ್ಲಿ ನನ್ನ ಖಾಸಗಿ ಜಮೀನಿಗೆ ಅನಧಿಕೃತ ಪ್ರವೇಶ ಮಾಡಿ, ಬೆಳೆಗಳು ಹಾಗೂ ಮರಗಳನ್ನು ಹಾಳು ಮಾಡಲಾಗಿದೆ ಎಂದು ಆಲೂರು ತಾಲೂಕಿನ ಕುಂದೂರು ಹೋಬಳಿಯ ಕದಾಳು ಗ್ರಾಮದ ರೈತ ಮಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಜಮೀನಿನಲ್ಲಿದ್ದ ೩೦ಕ್ಕೂ ಹೆಚ್ಚು ತೇಗದ ಮರಗಳು, ಶುಂಠಿ ಬೆಳೆ ಹಾಗೂ ತಂತಿ ಕಂಬಳನ್ನು ನಾಶ ಮಾಡಲಾಗಿದೆ. ಪೊಲೀಸರು, ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರೂ ಸ್ಪಂದನೆ ಇಲ್ಲ ಎಂದರು.
ಖ್ಯಾತ ತಾರೆಯರಿಂದ ಹಾಸನಾಂಬೆ ದರ್ಶನ
ಹಾಸನದ ಖ್ಯಾತ ಚಲನಚಿತ್ರ ನಟಿ ತಾರಾ ಮತ್ತು ನಟಿ ಅಂಜಲಿ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದರು. ಇಬ್ಬರೂ ತಾಯಿಗೆ ಮೊಡಿಲಕ್ಕಿ, ಸೀರೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ತಾರಾ, ಹಾಸನ ನನಗೆ ಹೊಸ ಸ್ಥಳವಲ್ಲ. ನಾನು ಬಣ್ಣ ಹಚ್ಚಿದ ಮೊದಲ ಚಿತ್ರವೂ ಈ ಜಿಲ್ಲೆಯಲ್ಲಿ ಶೂಟ್ ಆಗಿತ್ತು. ಬಯಲುಸೀಮೆ ಹುಡುಗ, ಮಲೆನಾಡು ಹುಡುಗಿ, ಮೈಸೂರು ಹುಡುಗ ಸೇರಿದಂತೆ ಹಲವು ಚಿತ್ರಗಳ ಸ್ಮೃತಿಗಳು ಹಾಸನಕ್ಕೆ ಸಂಬಂಧಿಸಿದೆ ಎಂದು ನೆನಪಿಸಿಕೊಂಡರು. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಆದರೆ ಈ ಬಾರಿ ದೇವಾಲಯದಲ್ಲಿ ಕಂಡುಬಂದ ಅನುಕೂಲತೆಗಳು, ಶಿಸ್ತಿನ ವ್ಯವಸ್ಥೆ ಹಾಗೂ ಭಕ್ತರಿಗಾದ ಸೌಲಭ್ಯಗಳು ಪ್ರಶಂಸನೀಯವಾಗಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಎಲ್ಲರಿಗೂ ಧನ್ಯವಾದಗಳು ಎಂದರು.
ಬಿಜೆಪಿಗೆ ನಿಷ್ಠಾವಂತ ಕಾರ್ಯಕರ್ತರು ಬಲಿಷ್ಠ ಶಕ್ತಿ
ಬಿಜೆಪಿಗೆ ನಿಷ್ಠಾವಂತ ಕಾರ್ಯಕರ್ತರು ಬಲಿಷ್ಠ ಶಕ್ತಿಯಾಗಿದ್ದು, ಕಾರ್ಯಕರ್ತರ ಸದೃಢ ಸಂಕಲ್ಪದಿಂದ ಮಾತ್ರ ಚುನಾವಣೆಯಲ್ಲಿ ಪಕ್ಷ ಜಯ ಸಾಧಿಸಲು ಸಾಧ್ಯ. ಈ ದಿಸೆಯಲ್ಲಿ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ತಾಲೂಕು, ಜಿಲ್ಲೆಯನ್ನು ಬಿಜೆಪಿ ಭದ್ರ ಕೋಟೆ ಎಂಬುದನ್ನು ಪುನಃ ಸಾಬೀತುಪಡಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಕಲಾವಿದ ರವೀಂದ್ರಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಒತ್ತಾಯ
ಧರ್ಮಸ್ಥಳ ಮಾದರಿಯಲ್ಲಿ ಗಣಪತಿ ಆಸ್ಥಾನ ಮಂಟಪವನ್ನು ಸಿದ್ಧ ಪಡಿಸಿರುವ ಕಲಾವಿದ ಸಿ. ಎಂ. ರವೀಂದ್ರರವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಒತ್ತಾಯ ಮಾಡಿದ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾಳೇನಹಳ್ಳಿ ಆನಂದ ಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದರು. ಪಟ್ಟಣದ ಹಿರಿಯ ಕಲಾವಿದರಾದ ಸಿ ಎಂ ರವೀಂದ್ರರ ಕೈಚಳಕದಿಂದ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪವನ್ನು ಧರ್ಮಸ್ಥಳ ಮಾದರಿಯಲ್ಲಿ ಗಣೇಶನನ್ನು ಅಲಂಕಾರ ಮಾಡಿರುವುದು ಸಾರ್ವಜನಿಕರಿಂದ ತುಂಬಾ ಪ್ರಶಂಸೆಗೆ ಕಾರಣವಾಗಿದೆ.ಇಂತಹ ನುರಿತ ಕಲಾವಿದರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯ ಮಾಡಿದರು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ
ಅಕ್ಟೋಬರ್ 19ರಂದು ನಡೆಯುವ ಟಿಎಪಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಷೇರುದಾರ ರೈತರ ಆಶೀರ್ವಾದದಿಂದ ಹೆಚ್ಚಿನ ಬಹುಮತಗಳೊಂದಿಗೆ ಜಯಗಳಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿ ಎನ್ ಪುಟ್ಟಸ್ವಾಮಿಗೌಡ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಉತ್ತಮ ಆಡಳಿತ ದೃಷ್ಟಿಯಿಂದ ಸಂಘದ ಸದಸ್ಯರು ಕಣದಲ್ಲಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡುವ ಮೂಲಕ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ವಸ್ತುಗಳ ರಾಶಿ
ಅರೆಹಳ್ಳಿ ಪಟ್ಟಣದ ಹೊರವಲಯ ಸ್ಮಶಾನದ ಹತ್ತಿರ ಹಾಗೂ ಇನ್ನಿತರ ವಿವಿಧ ರಸ್ತೆ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತಿದ್ದು ಸುತ್ತಮುತ್ತಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ದಾರಿಹೋಕರು ಮೂಗು ಮುಚ್ಚಿ ಓಡಾಡುತ್ತಾ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಕಸ ತಂದು ಪಟ್ಟಣದ ಹೊರವಲಯ ಲಿಂಗಾಪುರ ಗ್ರಾಮ ವ್ಯಾಪ್ತಿಯ ಸ್ಮಶಾನದ ಹತ್ತಿರ ಸೇರಿದಂತೆ ಇನ್ನಿತರ ವಿವಿಧ ರಸ್ತೆಯ ಬದಿಗಳಲ್ಲಿ ತ್ಯಾಜ್ಯವನ್ನು ಬಿಸಾಡುತ್ತ ರಾಶಿ ಹಾಕುತ್ತಿರುವುದನ್ನು ಕಂಡು ಸಾರ್ವಜನಿಕರು ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕುಡಿತ ಬಿಟ್ಟು ಕುಟುಂಬದ ಏಳಿಗೆಯಲ್ಲಿ ಸ್ತ್ರೀಯೊಂದಿಗೆ ಸಹಕರಿಸಿ
ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಟ್ರಸ್ಟ್‌ ವತಿಯಿಂದ 3ನೇ ದಿನದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮಸ್ಥಳದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು ಕರ್ನಾಟಕದಲ್ಲಿ ಈಗಾಗಲೇ 1993 ಮದ್ಯವರ್ಜನ ಶಿಬಿರ ಹಮ್ಮಿಕೊಂಡು ಮದ್ಯವರ್ಜನ ವ್ಯಸನ ಮುಕ್ತಿ ಮಾಡಲು ಇಂತಹ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ದುಶ್ಚಟ ಮುಕ್ತ ಸಮಾಜದ ನಿರ್ಮಾಣ ನಿಮ್ಮೆಲ್ಲರ ಹೊಣೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿ
ರಾಜ್ಯ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಭದ್ರಾ ಕಾಡಾ ಪ್ರಾಧಿಕಾರದ ಸವಲತ್ತುಗಳನ್ನು ಪ್ರತಿ ಮನೆ ಮನೆಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರು ಹೊರಬೇಕು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಕರೆ ನೀಡಿದರು.
  • < previous
  • 1
  • ...
  • 550
  • 551
  • 552
  • 553
  • 554
  • 555
  • 556
  • 557
  • 558
  • ...
  • 14637
  • next >
Top Stories
ಮೇಕೆದಾಟು ಡ್ಯಾಂಗೆ ಬೇಕಿದೆ 5000 ಹೆಕ್ಟೇರ್‌ ಭೂಮಿ
ಮೇಕೆದಾಟು ಯೋಜನೆಗೆ ಸಿದ್ಧತೆ ಮಾಡ್ಕೊಳ್ಳಿ : ಸಿಎಂ
ಸ್ಪೇಸ್‌ ಟೆಕ್ನಾಲಜಿ, ಐಟಿ ನೀತಿಗೆ ಸಂಪುಟ ಅಸ್ತು
2026ನೇ ವರ್ಷದ 20 ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ಮಧುಮೇಹ ಎಂದರೆ ಏನು? ಯಾರಿಗೆ ಬರಬಹುದು ? ಲಕ್ಷಣ ಹಾಗೂ ಚಿಕಿತ್ಸೆ ಹೇಗೆ ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved