ಸಾರಸ್ವತ ವರಪುತ್ರ ಭೈರಪ್ಪ ನಿಧನಕ್ಕೆ ಕಂಬನಿಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರು ರಚಿಸಿದ ಕಾದಂಬರಿಗಳು ಹಲವಾರು ಭಾಷೆಗಳಲ್ಲಿ, ಕೆಲವು ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿವೆ. ಇನ್ನು ಕೆಲವು ಕಾದಂಬರಿಗಳು ನಾಟಕ, ಧಾರಾವಾಹಿಗಳಲ್ಲಿ ಪ್ರಸಾರಗೊಂಡಿವೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು, ಸಾರಸ್ವತ ವರಪುತ್ರ ಎಂದು ಕಂಬನಿ ಮಿಡಿದರು. ಗುಜರಾತ್ ಸೇರಿದಂತೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೇಯಸ್ಸು ಅವರಿಗೆ ಇದೆ ಎಂದರು.