ಮಯೂರವಾಹನದಲ್ಲಿ ಕೌಮಾರಿಯಾಗಿ ಕಣ್ತುಂಬಿದ ಅಧಿದೇವತೆಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ರಾಜ್ಯ,ದೇಶದ ನಾನಾ ಕಡೆಗಳ ಜನರನ್ನು ಆಕರ್ಷಿಸುತ್ತಿದ್ದು ಶ್ರೀ ಶಾರದಾಂಬೆ ದರ್ಶನ, ರಾಜಬೀದಿ ಉತ್ಸವ, ದಸರೆಯ ದರ್ಬಾರ್ ಸೇರಿದಂತೆ ಎಲ್ಲೆಡೆ ಜನಸ್ತೋಮವೇ ಕಂಡು ಬರುತ್ತಿದೆ.