ಆಯುರ್ವೇದಕ್ಕೆ ಬೇಕಿದೆ ಹೆಚ್ಚಿನ ಪ್ರಚಾರ:ಪಿ. ಎಚ್. ಪೂಜಾರಆಯುರ್ವೆದದ ಮೂಲ ಭಾರತವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಿ ಚಿಕಿತ್ಸಾ ವಿಧಾನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೇಗ ಗುಣಮುಖರಾಗಲು ವಿದೇಶಿ ಔಷಧಿ ಸೇವನೆಗೆ ಮುಂದಾಗುತ್ತಿರುವ ಸಂದರ್ಭದಲ್ಲೂ, ಆಯುರ್ವೆದವ ಯಾವುದೇ ದುಷ್ಪರಿಣಾಮಗಳಿಲ್ಲದೆ ನಿಧಾನವಾಗಿ ಜೀವನದ ತುಂಬಾ ಲಾಭ ನೀಡುವ ಚಿಕಿತ್ಸಾ ವಿಧಾನವಾಗಿದೆ. ಆದ್ದರಿಂದ ಇಂದಿನ ದಿನಗಳಲ್ಲಿ ಆಯುರ್ವೇದ ಪ್ರಚಾರವನ್ನು ಹೆಚ್ಚಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಹೇಳಿದರು.