ಪರ್ವತಗೌಡ ಪಾಟೀಲ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ

| Published : Aug 24 2024, 01:27 AM IST / Updated: Aug 24 2024, 01:28 AM IST

ಸಾರಾಂಶ

ಬೈಲಹೊಂಗಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ ಅಧ್ಯಕ್ಷರಾಗಿ ವಕ್ಕುಂದ ಗ್ರಾಮದ ಪರ್ವತಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ನೇಸರಗಿ ಗ್ರಾಮದ ಮಾಲತಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.

ಬೈಲಹೊಂಗಲ: ಬೈಲಹೊಂಗಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ ಅಧ್ಯಕ್ಷರಾಗಿ ವಕ್ಕುಂದ ಗ್ರಾಮದ ಪರ್ವತಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ನೇಸರಗಿ ಗ್ರಾಮದ ಮಾಲತಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕ್‌ ನಿರ್ದೇಶಕರಾದ ಶಂಕರಗೌಡ ಪಾಟೀಲ, ಉಮೇಶ ಪಾಟೀಲ, ಶಂಕರಕುಮಾರ ಚಿಟ್ಟಿ, ಯಲ್ಲಪ್ಪ ಕೌಜಲಗಿ, ಅಕ್ಷರ ಆನಿಕಿವಿ, ಜಗದೀಶ ಬಜೇರಿ, ಶಿವಾನಂದ ಕಲ್ಲೂರ, ಲಕ್ಷ್ಮಪ್ಪ ಮಾಸ್ತಮರ್ಡಿ, ರತ್ನವ್ವ ಧಾರವಾಡ, ಗಂಗಾಧರ ಹೊಂಡದ, ಆನಂದ ಮೂಗಿ ಅರವಳ್ಳಿ, ಗ್ರಾಮದ ರಾಜನಗೌಡ ಪಾಟೀಲ, ವಕ್ಕುಂದ ಗ್ರಾಮದ ಹಿರಿಯರಾದ ರಾಯನಗೌಡ ಪಾಟೀಲ, ವಕ್ಕುಂದ ಗ್ರಾಪಂ ಅಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಗಜದಂಡ ಸುತಗಟ್ಟಿ, ಅಶೋಕ ಭದ್ರಶೆಟ್ಟಿ, ಸುರೇಶ ಗಣಾಚಾರಿ, ಉಳವಪ್ಪ ಭದ್ರಶೆಟ್ಟಿ, ಚಂದನ ಕೌಜಲಗಿ, ಮಹಾಂತೇಶ ಮೂಗಿ, ಹೊಳೆಪ್ಪನವರ ವ್ಯವಸ್ಥಾಪಕ ಎಂ.ಟಿ.ಗಾಣಿಗೇರ ಹಾಗೂ ಸಿಬ್ಬಂದಿ ಇದ್ದರು. ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರ ಕಚೇರಿಯ ಹರೀಶ ಕಾಂಬಳೆ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.