ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ನಲ್ಲಿಮರದಹಳ್ಳಿ ಗ್ರಾಮದಲ್ಲಿ ಅಂಗವಿಕಲ ಪತಿ-ಪತ್ನಿಯರನ್ನು ಉದ್ದೇಶಪೂರ್ವಕವಾಗಿ ಇತರ ಸಮುದಾಯದವರು ನಿರಂತರವಾಗಿ ಥಳಿಸಿ ಪ್ರಾಣಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ವಿಕಲಚೇತನರ ಒಕ್ಕೂಟದ ವತಿಯಿಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಭಾನುವಾರ ಪ್ರತಿಭಟನೆ ನಡೆಸಲಾಯಿತು.ಒಕ್ಕೂಟದ ಕಿರಣ್ ನಾಯಕ್ ಮಾತನಾಡಿ, ತಾಲೂಕಿನ ನಲ್ಲಿಮರದಹಳ್ಳಿ ಗ್ರಾಮದಲ್ಲಿ ಅಂಗವಿಕಲ ಪತಿ-ಪತ್ನಿಯರನ್ನು ಅವರ ಆಸ್ತಿ ಮತ್ತು ಮನೆ ಕಬಳಿಸುವುದಕ್ಕೆ ಉದ್ದೇಶಪೂರ್ವಕವಾಗಿ ಇತರ ಸಮುದಾಯದವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ ಇವರಿಗೆ ಪೊಲೀಸರು ಇವರನ್ನು ಕಡೆಗಣಿಸಿ ಹಲ್ಲೆ ನಡೆಸಿದವರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ದೂರು ನೀಡಿದರೂ ಕ್ರಮ ಇಲ್ಲಇಂತಹ ಹಲ್ಲೆ ಆರೋಪಿಗಳಿಗೆ ವಿರುದ್ದ ದೂರು ನೀಡಿದರೂ ಪ್ರಕರಣ ದಾಖಲಾಗದಿರುವುದು ವಿಷಾದನೀಯ ಸಂಗತಿ ಎಂದ ಅವರು ಜಿಲ್ಲಾ ಹಾಗೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದ್ದು ಇದೇ ರೀತಿ ಮುಂದುವರಿದಲ್ಲಿ ಸರಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.ಇದೇ ವೇಳೆ ಪ್ರತಿಭಟನಾ ಕಾರರೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶರಣಪ್ಪ ಮಾತನಾಡಿ, ನಿಮಗೆ ನ್ಯಾಯ ಒದಗಿಸಲು ಪೋಲಿಸರು ನಿಮ್ಮೋಂದಿಗಿರುತ್ತಾರೆ. ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಹಲ್ಲೇ ಮಾಡಿದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಹಲ್ಲೆ ಗೊಳಗಾದವರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು. ಕ್ರಮ ಕೈಗೊಳ್ಳುವ ಭರವಸೆ
ಪಿಎಸ್ಐ ಶರಣಪ್ಪ ಭರವಸೆ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆ ವೇಳೆ ಸಂಘಟನೆಯ ಕೆ.ಜಿ.ಸುಭ್ರಮಣ್ಯಂ, ಮಮತಾ, ಮಂಜುನಾಥ್, ಕೃಷ್ಣಾ, ಕಾವ್ಯಾ, ಜಯಂತಿ, ನರಸಿಂಹಮೂರ್ತಿ, ಶ್ರೀನಿವಾಸ್, ಮತ್ತಿತರರು ಇದ್ದರು.