ಸಾರಾಂಶ
ಅಥಣಿ: ಪ್ರತಿ ಶ್ರಾವಣ ಮಾಸದಲ್ಲಿ ಬರುವ ನೂಲಹುಣ್ಣಿಮೆ ರಕ್ಷಾ ಬಂಧನವನ್ನು ಹೊತ್ತು ತರುತ್ತದೆ. ಅಥಣಿ ಪಟ್ಟಣದ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ರಾಖಿಗಳನ್ನು ಖರೀದಿಸುವಲ್ಲಿ ಸಹೋದರಿಯರು ಕಳೇದು ಹೋಗಿದ್ದರು. ಬಣ್ಣ ಬಣ್ಣದ ರಾಖಿಗಳು, ವಿವಿಧ ವಿನ್ಯಾಸ ಹೊಂದಿರುವ ರಾಕಿಗಳು ಚಿಣ್ಣರನ್ನು ಮತ್ತು ಸಹೋದರಿಯರನ್ನು ಆಕರ್ಷಿಸುತ್ತಿದ್ದವು. ಅಣ್ಣ-ತಂಗಿಯರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನದ ಹಬ್ಬ ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆ ಅಥಣಿಯಲ್ಲಿ ರಾಕಿ ಮಾರಾಟ ಕೂಡ ಜೋರಾಗಿದೆ. ಇನ್ನು ಡೋರೆಮೋನ್, ಛೋಟಾಭೀಮ್, ರಬ್ಬರ್, ಲೈಟಿಂಗ್ ಮುಂತಾದ ಆಕರ್ಷಕ ರಾಕಿಗಳು ಚಿಣ್ಣರ ಆಕರ್ಷಣೆಯಾಗಿದ್ದವು. ಕಾಟನ್, ಸಿಲ್ವರ್ ಮೆಟಲ್, ಕುಂದನ್, ಸ್ಟೋನ್, ಹ್ಯಾಂಡಮೇಡ್ ವಿವಿಧ ಪ್ರಕಾರದ ರಾಖಿಗಳು ₹5 ರಿಂದ ಹಿಡಿದು ₹200 ವರೆಗೂ ಮಾರಾಟವಾಗುತ್ತಿದ್ದವು.----------------------------
ರಕ್ಷಾ ಬಂಧನ ಕೋಟ್ರಾಖಿ ಹಬ್ಬವು ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸುವುದು ಮಾತ್ರವಲ್ಲದೆ ಕುಟುಂಬದಲ್ಲಿ ಏಕತೆ, ಪ್ರೀತಿ ಮತ್ತು ಗೌರವದ ಭಾವನೆಯನ್ನು ಬೆಳೆಸುತ್ತದೆ. ಸೋಮವಾರ ರಾಕಿ ಹಬ್ಬ ಇರುವುದರಿಂದ ಇಂದೇ ರಾಖಿಗಳನ್ನು ಖರೀದಿಸುತ್ತಿದ್ದೇನೆ.ಸೌಮ್ಯ ಹಿರೇಮಠ, ವಿದ್ಯಾರ್ಥಿನಿ
ನಾವು ಪ್ರತಿವರ್ಷ ಮಹಾರಾಷ್ಟ್ರದ ಸಾಂಗ್ಲಿಯಿಂದ ವಿವಿಧ ಬಗೆಯ ರಾಖಿಗಳನ್ನು ತರುತ್ತೇವೆ. ಪ್ರತಿ ವರ್ಷದಂತೆ ಈ ವರ್ಷವೂ ಮಾರಾಟ ಚೆನ್ನಾಗಿದೆ. ಹೆಚ್ಚಾಗಿ ಸಹೋದರಿಯರು ಅಂಗಡಿಗಳಿಗೆ ಆಗಮಿಸಿ ಬಣ್ಣ ಬಣ್ಣದ, ಆಧುನಿಕ ಶೈಲಿಯ ರಾಖಿಗಳನ್ನು ಖರೀದಿಸುತ್ತಿದ್ದಾರೆ.ಎಸ್.ಎಂ.ಜಾಧವ, ವ್ಯಾಪಾರಿರಕ್ಷಾ ಬಂಧನ ಅಣ್ಣ ತಂಗಿಯ ಬಾಂಧವ್ಯ ಮತ್ತು ಕುಟುಂಬಗಳನ್ನು ಒಟ್ಟುಗೂಡಿಸುತ್ತದೆ. ಒಡಹುಟ್ಟಿದವರ ಬಾಂಧವ್ಯದ ಮಹತ್ವವನ್ನು ಬಲಪಡಿಸುತ್ತದೆ. ಇಂತಹ ಸಂಸ್ಕೃತಿಯ ಶಕ್ತಿಯನ್ನು ಮಕ್ಕಳಲ್ಲಿ ತುಂಬಿ ಬೆಳೆಸುವ ಅಗತ್ಯವಿದೆ.ಡಾ.ಪ್ರಿಯಂವಧಾ ಹುಲಗಬಾಳಿ, ಸಾಹಿತಿ